ಮುಂಬೈ: ದ.ಆಫ್ರಿಕಾ ನೆಲದಲ್ಲಿ ಐತಿಹಾಸಿಕ ಟೆಸ್ಟ್ ಸರಣಿ ಗೆಲ್ಲುವ ಕನಸು ಹೊತ್ತಿರುವ ಟೀಂ ಇಂಡಿಯಾಗೆ ಆರಂಭದಲ್ಲೇ ಆಘಾತ ಎದುರಾಗಿದೆ.
ಮೊಹಮ್ಮದ್ ಶಮಿ ಪಾದದ ನೋವಿನಿಂದ ಬಳಲುತ್ತಿದ್ದ ದ.ಆಫ್ರಿಕಾ ಸರಣಿಯಿಂದ ಅಧಿಕೃತವಾಗಿ ಹೊರಹೋಗಬಹುದು ಎಂದು ವರದಿಗಳಿತ್ತು. ಅದೀಗ ಅಧಿಕೃತವಾಗಿದೆ.
ಏಕದಿನ ವಿಶ್ವಕಪ್ ನ ಹೀರೋ ಮೊಹಮ್ಮದ್ ಶಮಿ ಪ್ರಸ್ತುತ ಅದ್ಭುತ ಫಾರ್ಮ್ ನಲ್ಲಿದ್ದರು. ತಮ್ಮ ಮನೆಯಲ್ಲೇ ಸೌತ್ ಆಫ್ರಿಕಾ ಸರಣಿಗೆ ಅಭ್ಯಾಸವನ್ನೂ ಆರಂಭಿಸಿದ್ದರು. ಆದರೆ ಇದೀಗ ಪಾದನೋವಿನಿಂದಾಗಿ ಸರಣಿಯಿಂದಲೇ ಹೊರಗುಳಿಯಬೇಕಾಗಿ ಬಂದಿದೆ.
ಇನ್ನು, ಮೊಹಮ್ಮದ್ ಶಮಿಯಿದ್ದು ಈ ಕತೆಯಾದರೆ ಬಹಳ ದಿನಗಳ ನಂತರ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿರುವ ದೀಪಕ್ ಚಹರ್ ಏಕದಿನ ಸರಣಿಯಿಂದ ಹೊರಗುಳಿಯುವ ನಿರ್ಧಾರ ಮಾಡಿದ್ದಾರೆ. ವೈಯಕ್ತಿಕ ಕಾರಣಗಳಿಂದಾಗಿ ದೀಪಕ್ ಚಹರ್ ಸರಣಿಯಲ್ಲಿ ಭಾಗವಹಿಸದೇ ಇರಲು ನಿರ್ಧರಿಸಿದ್ದಾರೆ.