ಮುಂಬೈ: ದ.ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಟೀಂ ಇಂಡಿಯಾಗೆ ಹೊಸ ಕೋಚಿಂಗ್ ಸಿಬ್ಬಂದಿಗಳ ಆಗಮನವಾಗಿದೆ. ದ್ರಾವಿಡ್ ವಿಶ್ರಾಂತಿ ಪಡೆದಿದ್ದಾರೆ.
ಟಿ20 ಸರಣಿ ಬಳಿಕ ಭಾರತ ಮತ್ತು ಆಪ್ರಿಕಾ ನಡುವೆ ಏಕದಿನ ಸರಣಿ ಆರಂಭವಾಗುತ್ತಿದೆ. ಈ ಸರಣಿಯಿಂದ ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಮತ್ತು ಅವರ ಸಹ ಸಿಬ್ಬಂದಿಗಳು ವಿಶ್ರಾಂತಿ ಪಡೆದಿದ್ದಾರೆ.
ಅವರ ಬದಲಿಗೆ ಎನ್ ಸಿಎ ಸಿಬ್ಬಂದಿಯಾಗಿದ್ದ ಸೀತಾಂಶು ಕೋಟಕ್ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಇದಕ್ಕೆ ಮೊದಲು ಐರ್ಲೆಂಡ್ ಸರಣಿಯಲ್ಲಿ ದ್ರಾವಿಡ್ ಅನುಪಸ್ಥಿತಿಯಲ್ಲಿ ಸೀತಾಂಶು ಕೋಟಕ್ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. ಆಫ್ರಿಕಾ ಏಕದಿನ ಸರಣಿಗೆ ಬ್ಯಾಟಿಂಗ್ ಕೋಚ್ ಆಗಿ ಅಜಯ್ ರಾತ್ರಾ ಮತ್ತು ಬೌಲಿಂಗ್ ಕೋಚ್ ಆಗಿ ರಾಜೀವ್ ದತ್ತಾ ಕಾರ್ಯನಿರ್ವಹಿಸಲಿದ್ದಾರೆ.
ಇದು ಕೇವಲ ಏಕದಿನ ಸರಣಿಗೆ ಮಾತ್ರ ಸೀಮಿತವಾಗಿರಲಿದೆ. ಟೆಸ್ಟ್ ಸರಣಿ ವೇಳೆಗೆ ಕೋಚ್ ರಾಹುಲ್ ದ್ರಾವಿಡ್ ಮತ್ತು ಅವರ ಬಳಗ ಕಮ್ ಬ್ಯಾಕ್ ಮಾಡಲಿದೆ.