Publish Date: Sun, 17 Dec 2023 (13:30 IST)
Updated Date: Sun, 17 Dec 2023 (13:44 IST)
ಮುಂಬೈ: ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರರು ಇತ್ತೀಚೆಗಿನ ದಿನಗಳಲ್ಲಿ ಪುರುಷ ಕ್ರಿಕೆಟಿಗರಂತೇ ಅಭಿಮಾನಿಗಳ ಮೆಚ್ಚಿನ ತಾರೆಯರಾಗುತ್ತಿದ್ದಾರೆ.
ಮಹಿಳಾ ಕ್ರಿಕೆಟ್ ತಂಡವೆಂದರೆ ಮೊದಲು ಕೇಳಿಬರುವ ಹೆಸರುಗಳು ಸ್ಮೃತಿ ಮಂಧನಾ, ಶಫಾಲಿ ವರ್ಮ, ಹರ್ಮನ್ ಪ್ರೀತ್ ಕೌರ್ ಮತ್ತು ಜೆಮಿಮಾ ರೊಡ್ರಿಗಸ್. ಭಾರತ ಮಹಿಳಾ ತಂಡದ ಸ್ಟಾರ್ ಆಟಗಾರ್ತಿಯರು ಇವರು.
ಸೋಷಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ಯುವತಿಯರ ಗುಂಪೊಂದು ಮೈದಾನದ ಹೊರಗೆ ನಿಂತು ಹರ್ಮನ್ ಪ್ರೀತ್ ಕೌರ್ ಮತ್ತು ಜೆಮಮಿಮಾರನ್ನು ನೋಡಬೇಕು, ಅಟೋಗ್ರಾಫ್ ಪಡೆಯಬೇಕು ಎಂದು ಕಾದು ನಿಂತಿದ್ದರು. ಆದರೆ ಅವರಿಗೆ ಭದ್ರತಾ ಅಧಿಕಾರಿಗಳು ಮೆಚ್ಚಿನ ಕ್ರಿಕೆಟ್ ಆಟಗಾರ್ತಿಯರನ್ನು ನೋಡಲು ಅವಕಾಶ ಕೊಟ್ಟಿರಲಿಲ್ಲ. ಇದಕ್ಕೆ ಅವರು ಸ್ಟೇಡಿಯಂ ಹೊರಗಡೆ ನಿಂತು ಕಣ್ಣೀರು ಹಾಕಿದ್ದರು.
ಇದನ್ನು ಯೂ ಟ್ಯೂಬ್ ವಾಹಿನಿಯೊಂದು ಜೆಮಿಮಾ ಮತ್ತು ಹರ್ಮನ್ ಸೋಷಿಯಲ್ ಮೀಡಿಯಾ ಖಾತೆಗಳನ್ನು ಟ್ಯಾಗ್ ಮಾಡಿ ಪ್ರಸಾರ ಮಾಡಿತ್ತು. ಈ ವಿಡಿಯೋ ಜೆಮಿಮಾಗೂ ತಲುಪಿದ್ದು, ಅಭಿಮಾನಿಗಳನ್ನು ಖುದ್ದಾಗಿ ಭೇಟಿಯಾಗಿ ಅವರ ಜೊತೆ ಡ್ಯಾನ್ಸ್ ಮಾಡಿ, ಆಟೋಗ್ರಾಫ್, ಸೆಲ್ಫೀ ನೀಡಿ ಖುಷಿಪಡಿಸಿದ್ದಾರೆ. ಜೊತೆಗೆ ನೀವೂ ಮುಂದೊಂದು ದಿನ ಕ್ರಿಕೆಟ್ ಆಟಗಾರ್ತಿಯರಾಗಲು ಪ್ರಯತ್ನಿಸಿ ಎಂದು ಸ್ಪೂರ್ತಿ ತುಂಬಿದ್ದಾರೆ. ಜೆಮಿಮಾ ಹೃದಯವಂತಿಕೆಯನ್ನು ನೆಟ್ಟಿಗರು ಕೊಂಡಾಡಿದ್ದಾರೆ.