Select Your Language

Notifications

webdunia
webdunia
webdunia
webdunia

ರೋಹಿತ್ ಶರ್ಮಾರನ್ನು ಕಿತ್ತು ಹಾಕಿದ್ದಕ್ಕೆ ಸೂರ್ಯಕುಮಾರ್ ಪತ್ನಿ ಆಕ್ರೋಶ

ರೋಹಿತ್ ಶರ್ಮಾರನ್ನು ಕಿತ್ತು ಹಾಕಿದ್ದಕ್ಕೆ ಸೂರ್ಯಕುಮಾರ್ ಪತ್ನಿ ಆಕ್ರೋಶ
ಮುಂಬೈ , ಭಾನುವಾರ, 17 ಡಿಸೆಂಬರ್ 2023 (11:35 IST)
Photo Courtesy: Twitter
ಮುಂಬೈ: ರೋಹಿತ್ ಶರ್ಮಾರನ್ನು ನಾಯಕತ್ವದಿಂದ ಕಿತ್ತು ಹಾಕಿದ್ದಕ್ಕೆ ಮುಂಬೈ ಇಂಡಿಯನ್ಸ್ ವಿರುದ್ಧ ಸೂರ್ಯಕುಮಾರ್ ಯಾದವ್ ಪತ್ನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೋಹಿತ್ ಶರ್ಮಾರನ್ನು ನಾಯಕತ್ವದಿಂದ ಕೆಳಗಿಳಿಸಿ ಹಾರ್ದಿಕ್ ಪಾಂಡ್ಯರನ್ನು ನೇಮಿಸಿದ ಬೆನ್ನಲ್ಲೇ ಸೂರ್ಯಕುಮಾರ್ ಯಾದವ್ ಹೃದಯ ಚೂರಾದ ಇಮೋಜಿ ಹಾಕಿ ಬೇಸರ ವ್ಯಕ್ತಪಡಿಸಿದ್ದರು.

ಇದೀಗ ಸೂರ್ಯ ಪತ್ನಿ ದೇವಿಶಾ ಶೆಟ್ಟಿ ಕೂಡಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ ಸ್ಟಾಗ್ರಾಂನಲ್ಲಿ ‘ನೀವು ಒಬ್ಬರನ್ನು ಹೇಗೆ ನಡೆಸಿಕೊಳ್ಳುತ್ತೀರೋ ಅದು ಯಾವತ್ತೂ ಮರೆಯಲಾಗದು’ ಎಂದು ಬರೆದು ಆಕ್ರೋಶ ಹೊರಹಾಕಿದ್ದಾರೆ.

ಸೂರ್ಯಕುಮಾರ್ ಕೂಡಾ ಮುಂಬೈಯ ಭವಿಷ್ಯದ ನಾಯಕನಾಗುವ ಕನಸು ಕಂಡಿದ್ದರು. ಎಲ್ಕಕ್ಕಿಂತ ಹೆಚ್ಚಾಗು ರೋಹಿತ್ ಶರ್ಮಾ ಬೆಂಬಲದಿಂದಲೇ ಸೂರ್ಯ ಕುಮಾರ್ ರಾಷ್ಟ್ರೀಯ ತಂಡದಲ್ಲೂ ಮಿಂಚಿದ್ದರು. ಇಬ್ಬರ ನಡುವೆ ಉತ್ತಮ ಗೆಳೆತನವಿದೆ. ಈಗ ರೋಹಿತ್ ರನ್ನು ಕಿತ್ತು ಹಾಕಿದ್ದು ಅವರಿಗೂ ಶಾಕ್ ತಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರೋಹಿತ್ ಶರ್ಮಾಗೆ ಮೋಸ! ಒಗ್ಗಟ್ಟಾದ ಮುಂಬೈ ಇಂಡಿಯನ್ಸ್ ಆಟಗಾರರು?!