Select Your Language

Notifications

webdunia
webdunia
webdunia
webdunia

Rohit Sharma: ರೋಹಿತ್ ರಿಂದ ನಾಯಕತ್ವ ಕಿತ್ತುಕೊಂಡಿದ್ದಕ್ಕೆ ನಾಚಿಕೆಯಾಗಬೇಕು ನಿಮಗೆ!

Rohit Sharma: ರೋಹಿತ್ ರಿಂದ ನಾಯಕತ್ವ ಕಿತ್ತುಕೊಂಡಿದ್ದಕ್ಕೆ ನಾಚಿಕೆಯಾಗಬೇಕು ನಿಮಗೆ!
ಮುಂಬೈ , ಶನಿವಾರ, 16 ಡಿಸೆಂಬರ್ 2023 (08:40 IST)
Photo Courtesy: Twitter
ಮುಂಬೈ: ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವ ಸ್ಥಾನಕ್ಕೆ ರೋಹಿತ್ ಶರ್ಮಾರನ್ನು ಕಿತ್ತೊಗೆದು ಹಾರ್ದಿಕ್ ಪಾಂಡ್ಯರನ್ನು ಆಯ್ಕೆ ಮಾಡಿದ್ದಕ್ಕೆ ಅಭಿಮಾನಿಗಳು ಸಿಟ್ಟಾಗಿದ್ದಾರೆ.

ರೋಹಿತ್ ರಿಂದ ನಾಯಕತ್ವ ಕಸಿದುಕೊಂಡು ಹಾರ್ದಿಕ್ ಪಾಂಡ್ಯಗೆ ಪಟ್ಟಕಟ್ಟಲಾಗಿದೆ. ಇದಕ್ಕಾಗಿ ರೋಹಿತ್ ಅಭಿಮಾನಿಗಳು ಮುಂಬೈ ಇಂಡಿಯನ್ಸ್ ‍ಫ‍್ರಾಂಚೈಸಿಯನ್ನು ಹಿಗ್ಗಾಮುಗ್ಗಾ ಜಾಡಿಸಿದ್ದಾರೆ.

ರೋಹಿತ್ ರಿಂದ ನಾಯಕತ್ವ ಕಿತ್ತುಕೊಂಡಿದ್ದಕ್ಕೆ ನಿಮಗೆ ನಾಚಿಕೆಯಾಗಬೇಕು ಎಂದು ಹಿಡಿಶಾಪ ಹಾಕಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಶೇಮ್ ಆನ್ ಮುಂಬೈ ಇಂಡಿಯನ್ಸ್ ಎಂಬ ಹ್ಯಾಶ್ ಟ್ಯಾಗ್ ಹಾಕಿ ಅಭಿಯಾನವನ್ನೇ ಶುರು ಮಾಡಿದ್ದಾರೆ. ಹಲವರು ಮುಂಬೈ ಇಂಡಿಯನ್ಸ್ ಸೋಷಿಯಲ್ ಮೀಡಿಯಾ ಖಾತೆಯನ್ನು ಅನ್ ಫಾಲೋ ಮಾಡಿದ್ದು, ಏಕಾಏಕಿ 4 ಲಕ್ಷ ಹಿಂಬಾಲಕರನ್ನು ಕಳೆದುಕೊಂಡಿದೆ.

ಮತ್ತೆ ಕೆಲವರು ಕ್ಯಾಪ್ಟನ್ ನಾವು ನಿಮ್ಮನ್ನು ಮಿಸ್ ಮಾಡಿಕೊಳ್ಳಲಿದ್ದೇವೆ ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ. ನಿಮ್ಮ ನಾಯಕತ್ವವನ್ನು ನಾವು ಯಾವತ್ತೂ ಮರೆಯಲು ಸಾಧ‍್ಯವಿಲ್ಲ ಎಂದಿದ್ದಾರೆ. ಮತ್ತೆ ಕೆಲವರು ಬಾಹುಬಲಿಯ ಬೆನ್ನಿಗೆ ಕಟ್ಟಪ್ಪ ಚೂರಿ ಹಾಕುವ ದೃಶ್ಯ ಪ್ರಕಟಿಸಿ ಮುಂಬೈ ಇಂಡಿಯನ್ಸ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರೋಹಿತ್ ಶರ್ಮಾಗೆ ಕೊಕ್, ಹಾರ್ದಿಕ್ ನಾಯಕ: ಮುಂಬೈ ನೂತನ ನಾಯಕನಿಗೆ ಸಿಗಲಿರುವ ವೇತನವೆಷ್ಟು?