Select Your Language

Notifications

webdunia
webdunia
webdunia
webdunia

ಭಾರತ-ಬಾಂಗ್ಲಾ ಸರಣಿ ನಿರ್ಣಾಯಕ ಏಕದಿನ ಟೈನಲ್ಲಿ ಅಂತ್ಯ

ಭಾರತ-ಬಾಂಗ್ಲಾ ಸರಣಿ ನಿರ್ಣಾಯಕ ಏಕದಿನ ಟೈನಲ್ಲಿ ಅಂತ್ಯ
ಢಾಕಾ , ಶನಿವಾರ, 22 ಜುಲೈ 2023 (17:37 IST)
Photo Courtesy: Twitter
ಢಾಕಾ: ಭಾರತ ಮತ್ತು ಬಾಂಗ್ಲಾದೇಶ ಮಹಿಳಾ ಕ್ರಿಕೆಟ್ ತಂಡಗಳ ನಡುವಿನ ಸರಣಿ ನಿರ್ಣಾಯಕ 3 ನೇ ಏಕದಿನ ಪಂದ್ಯ ಟೈನಲ್ಲಿ ಅಂತ್ಯಗೊಂಡಿದೆ.

ಇದರಿಂದಾಗಿ ಚಾಂಪಿಯನ್ ಶಿಪ್ ನ್ನು ಎರಡೂ ತಂಡಗಳು ಹಂಚಿಕೊಂಡವು. ಇಂದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾ 50 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 225 ರನ್ ಗಳಿಸಿತು.

ಈ ಮೊತ್ತ ಬೆನ್ನತ್ತಿದ ಭಾರತ 49.3 ಓವರ್ ಗಳಲ್ಲಿ 225 ಕ್ಕೆ ಆಲೌಟ್ ಆಗುವ ಮೂಲಕ ಪಂದ್ಯ ಟೈ ಆಯಿತು. ಬಾಂಗ್ಲಾ ಪರ ಫರ್ಗಾನಾ ಹಕ್ 107 ರನ್ ಸಿಡಿಸಿದ್ದರು. ಭಾರತದ ಪರ ಸ್ಮೃತಿ ಮಂಧನಾ 59, ಹರ್ಲಿನ್ ಡಿಯೋಲ್ 77, ಜೆಮಿಮಾ ರೊಡ್ರಿಗಸ್ 33 ರನ್ ಸಿಡಿಸಿದ್ದರು. ಅಂತಿಮ ಓವರ್ ನಲ್ಲಿ ಭಾರತಕ್ಕೆ 6 ಎಸೆತಗಳಿಂದ 3 ರನ್ ಬೇಕಾಗಿತ್ತಷ್ಟೇ. ಆದರೆ ಆಗಲೇ 9 ವಿಕೆಟ್ ಕಳೆದುಕೊಂಡಿತ್ತು. ಮೊದಲ ಎರಡು ಎಸೆತಗಳಲ್ಲಿ ಮೇಘನಾ ಸಿಂಗ್ ಮತ್ತು ಜೆಮಿಮಾ ರೊಡ್ರಿಗಸ್ ತಲಾ 1 ರನ್ ಗಳಿಸಿದರು. ಮೂರನೇ ಎಸೆತದಲ್ಲಿ ಮೇಘನಾ ಬ್ಯಾಟ್ ವಂಚಿಸಿದ ಬಾಲ್ ಕೀಪರ್ ಕೈಗೆ ಸೇರಿತ್ತು. ಇದರೊಂದಿಗೆ ಪಂದ್ಯ ಟೈನಲ್ಲಿ ಅಂತ್ಯವಾಯಿತು.

Share this Story:

Follow Webdunia kannada

ಮುಂದಿನ ಸುದ್ದಿ

ಕಮ್ ಬ್ಯಾಕ್ ಮಾಡಲು ಸಿಕ್ಕಾಪಟ್ಟೆ ಶ್ರಮಪಡುತ್ತಿದ್ದಾರೆ ಕೆಎಲ್ ರಾಹುಲ್