ಪೋರ್ಟ್ ಆಫ್ ಸ್ಪೇನ್: ಟೀಂ ಇಂಡಿಯಾದಲ್ಲಿ ಒಬ್ಬೊಬ್ಬ ಬ್ಯಾಟರ್ ಕೂಡಾ ಶತಕ ಸಿಡಿಸಿದಾಗ ತಮ್ಮದೇ ಶೈಲಿಯಲ್ಲಿ ಸಂಭ್ರಮಿಸುತ್ತಾರೆ.
ಇಂದು ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿದ ಬಳಿಕ ಕೊಹ್ಲಿ ಸಂಭ್ರಮಾಚರಿಸಲು ಶುಬ್ಮನ್ ಗಿಲ್ ಸ್ಟೈಲ್ ಕಾಪಿ ಮಾಡಿದರು. ಗಿಲ್ ಶತಕ ಸಿಡಿಸಿದಾಗ ಪ್ರತೀ ಬಾರಿ ಶಿರ ಬಾಗಿ ನಮಿಸುತ್ತಾರೆ. ಕೊಹ್ಲಿ ಕೂಡಾ ಇಂದು ಇದೇ ರೀತಿ ಸಂಭ್ರಮಾಚರಿಸಿದರು.
ಬಳಿಕ ಎಂದಿನಂತೇ ಕೊಹ್ಲಿ ತಮ್ಮ ಕೊರಳಿನ ಮಾಲೆಯಲ್ಲಿರುವ ಲಾಕೆಟ್ ಗೆ ಮುತ್ತಿಕ್ಕಿ ಸಂಭ್ರಮಿಸಿದ್ದಾರೆ. ಕೊಹ್ಲಿಗೆ ಇದು 76 ನೇ ಅಂತಾರಾಷ್ಟ್ರೀಯ ಶತಕವಾಗಿತ್ತು.