Select Your Language

Notifications

webdunia
webdunia
webdunia
webdunia

ದಾಖಲೆಗಳ ಧೂಳೀಪಟ ಮಾಡಿದ ‘ಟನ್’ ಮೆಷಿನ್ ವಿರಾಟ್ ಕೊಹ್ಲಿ

ದಾಖಲೆಗಳ ಧೂಳೀಪಟ ಮಾಡಿದ ‘ಟನ್’ ಮೆಷಿನ್ ವಿರಾಟ್ ಕೊಹ್ಲಿ
ಪೋರ್ಟ್ ಆಫ್ ಸ್ಪೇನ್ , ಶುಕ್ರವಾರ, 21 ಜುಲೈ 2023 (20:28 IST)
Photo Courtesy: Twitter
ಪೋರ್ಟ್ ಆಫ್ ಸ್ಪೇನ್: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದ ಎರಡನೇ ದಿನವಾದ ಇಂದು ಟೀಂ ಇಂಡಿಯಾ ಪರ ವಿರಾಟ್ ಕೊಹ್ಲಿ ಶತಕ ಸಿಡಿಸಿದ್ದಾರೆ.

500 ನೇ ಪಂದ್ಯವಾಡುತ್ತಿರುವ ಕೊಹ್ಲಿ ಮೈಲಿಗಲ್ಲಿನ ಪಂದ್ಯದಲ್ಲಿ ಶತಕ ಗಳಿಸಿದ ಮೊದಲ ಬ್ಯಾಟರ್ ಎನಿಸಿಕೊಂಡರು. ಇದು ಅವರ ಟೆಸ್ಟ್ ಕ್ರಿಕೆಟ್ ನ 29 ನೇ ಮತ್ತು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 76 ನೇ ಶತಕವಾಗಿತ್ತು. 500 ಪಂದ್ಯಗಳಲ್ಲಿ ಅಧಿಕ ಶತಕ ಗಳಿಸಿದ ಬ್ಯಾಟಿಗರ ಪಟ್ಟಿಯಲ್ಲಿ ಸಚಿನ್ ತೆಂಡುಲ್ಕರ್ ರನ್ನು ಹಿಂದಿಕ್ಕಿ ಕೊಹ್ಲಿ ನಂ.1 ಆದರು. ಸಚಿನ್ 500 ಪಂದ್ಯಗಳನ್ನು ಆಡಿದ್ದಾಗ 75 ಶತಕ ಸಿಡಿಸಿದ್ದರು. ಅಲ್ಲದೆ ನಂ.4 ಬ್ಯಾಟಿಗರಾಗಿ ಗರಿಷ್ಠ ಶತಕ ಗಳಿಸಿದ ಟಾಪ್ 5 ಬ್ಯಾಟಿಗರ ಪಟ್ಟಿಯಲ್ಲಿ 25 ಶತಕಗಳೊಂದಿಗೆ ನಾಲ್ಕನೇ ಸ್ಥಾನಕ್ಕೇರಿದರು.

ಇತ್ತೀಚೆಗಿನ ವರದಿ ಬಂದಾಗ ಟೀಂ ಇಂಡಿಯಾ ಮೊದಲ ಇನಿಂಗ್ಸ್ ನಲ್ಲಿ 4 ವಿಕೆಟ್ ನಷ್ಟಕ್ಕೆ 334 ರನ್ ಗಳಿಸಿದೆ. ಕೊಹ್ಲಿ 117, ಜಡೇಜಾ 52 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ವಿಂಡೀಸ್ ಟೆಸ್ಟ್: ರೋಹಿತ್-ಕೊಹ್ಲಿ ಮಾಡಿದ ವಿಶೇಷ ದಾಖಲೆಗಳು