Select Your Language

Notifications

webdunia
webdunia
webdunia
webdunia

ಭಾರತ-ವಿಂಡೀಸ್ ಟೆಸ್ಟ್: ರೋಹಿತ್-ಕೊಹ್ಲಿ ಮಾಡಿದ ವಿಶೇಷ ದಾಖಲೆಗಳು

ಭಾರತ-ವಿಂಡೀಸ್ ಟೆಸ್ಟ್: ರೋಹಿತ್-ಕೊಹ್ಲಿ ಮಾಡಿದ ವಿಶೇಷ ದಾಖಲೆಗಳು
ಪೋರ್ಟ್ ಆಫ್ ಸ್ಪೇನ್ , ಶುಕ್ರವಾರ, 21 ಜುಲೈ 2023 (09:27 IST)
Photo Courtesy: Twitter
ಪೋರ್ಟ್ ಆಫ್ ಸ್ಪೇನ್: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮೊದಲ ದಿನ ಅರ್ಧಶತಕ ಸಿಡಿಸಿದ್ದು ಹಲವು ದಾಖಲೆಗಳನ್ನೂ ಮಾಡಿದ್ದಾರೆ.

ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮಾ 80 ರನ್ ಸಿಡಿಸಿ ಔಟಾದರು. ಸತತ ಎರಡನೇ ಶತಕ ಗಳಿಸುವ ಅವಕಾಶ ಮಿಸ್ ಆದರೂ ರೋಹಿತ್ ಟೆಸ್ಟ್ ಕ್ರಿಕೆಟ್ ನಲ್ಲಿ 2000 ರನ್ ಪೂರೈಸಿದ ಸಾಧನೆ ಮಾಡಿದರು. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಆರಂಭಿಕನಾಗಿ ಗರಿಷ್ಠ ಸರಾಸರಿ (53.55) ಹೊಂದಿದ ಬ್ಯಾಟರ್ ಎಂಬ ದಾಖಲೆ ರೋಹಿತ್ ರದ್ದಾಯಿತು.

ಕೊಹ್ಲಿಗೆ ಇದು 500 ನೇ ಅಂತಾರಾಷ್ಟ್ರೀಯ ಪಂದ್ಯವಾಗಿತ್ತು. 500 ನೇ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ ಮೊದಲ ಆಟಗಾರ ಎನಿಸಿಕೊಂಡರು.ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಕೊಹ್ಲಿ ರನ್ ಗಳಿಕೆ ಈಗ 25548 ರನ್ ಆಗಿದೆ. ಇದರೊಂದಿಗೆ ಗರಿಷ್ಠ ರನ್ ಗಳಿಸಿದ ಜಾಗತಿಕ ಆಟಗಾರರ ಪಟ್ಟಿಯಲ್ಲಿ 5 ನೇ ಸ್ಥಾನಕ್ಕೇರಿದರು. ಕೊಹ್ಲಿ ಈಗ ಶತಕದ ಹೊಸ್ತಿಲಲ್ಲಿದ್ದು, ಶತಕ ಗಳಿಸಿದರೆ ಮತ್ತಷ್ಟು ದಾಖಲೆಗಳು ಗ್ಯಾರಂಟಿ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ವಿಂಡೀಸ್ ಟೆಸ್ಟ್: ಕೊಹ್ಲಿಗೆ 76 ನೇ ಶತಕದ ಕನಸು