Publish Date: Mon, 18 Dec 2023 (08:20 IST)
Updated Date: Mon, 18 Dec 2023 (08:43 IST)
ಜೊಹಾನ್ಸ್ ಬರ್ಗ್: ಭಾರತ ಮತ್ತು ದ.ಆಫ್ರಿಕಾ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ 5 ವಿಕೆಟ್ ಕಬಳಿಸಿ ದಾಖಲೆ ಮಾಡಿದ ಅರ್ಷ್ ದೀಪ್ ಸಿಂಗ್ ರನ್ನು ಇಂದು ಎಲ್ಲರೂ ಕೊಂಡಾಡುತ್ತಿದ್ದಾರೆ.
ಮೊನ್ನೆಯಷ್ಟೇ ಟಿ20 ಸರಣಿಯಲ್ಲಿ ಅರ್ಷ್ ದೀಪ್ ಸಿಂಗ್ ಸಿಕ್ಕಾಪಟ್ಟೆ ರನ್ ನೀಡಿ ದುಬಾರಿ ಎನಿಸಿಕೊಂಡಾಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಟ್ರೋಲ್ ಗೊಳಗಾಗಿದ್ದರು.
ಆದರೆ ಇಂದು ಅದೇ ಅರ್ಷ್ ದೀಪ್ ಸಿಂಗ್ ರನ್ನು ನೆಟ್ಟಿಗರು ಕೊಂಡಾಡುತ್ತಿದ್ದಾರೆ. ಟೀಂ ಇಂಡಿಯಾದ ಅತ್ಯುತ್ತಮ ಯುವ ವೇಗಿ ಎಂದು ಹೊಗಳುತ್ತಿದ್ದಾರೆ. ಅಂದು ಆದ ಅವಮಾನಕ್ಕೆ ಇಂದು ತಕ್ಕ ಸನ್ಮಾನವೇ ಸಿಗುತ್ತಿದೆ.
ಮೊದಲ ಏಕದಿನ ಪಂದ್ಯದಲ್ಲಿ ಅರ್ಷ್ ದೀಪ್ ಸಿಂಗ್ 5 ವಿಕೆಟ್ ಕಬಳಿಸಿದ್ದರು. ಈ ಮೂಲಕ ದ.ಆಫ್ರಿಕಾದಲ್ಲಿ 5 ವಿಕೆಟ್ ಕಬಳಿಸಿದ ಭಾರತ ಮೊದಲ ವೇಗಿ ಎಂಬ ದಾಖಲೆಯನ್ನು ಅರ್ಷ್ ದೀಪ್ ಮಾಡಿದ್ದಾರೆ.