Select Your Language

Notifications

webdunia
webdunia
webdunia
webdunia

ವರ್ಷದ ಹಿನ್ನೋಟ: 2023 ರಲ್ಲಿ ಭಾರತದ ಲೀಡಿಂಗ್ ರನ್ ಸ್ಕೋರರ್ ಕೊಹ್ಲಿ, ರೋಹಿತ್ ಅಲ್ಲ, ಇನ್ಯಾರು?

ವರ್ಷದ ಹಿನ್ನೋಟ: 2023 ರಲ್ಲಿ ಭಾರತದ ಲೀಡಿಂಗ್ ರನ್ ಸ್ಕೋರರ್ ಕೊಹ್ಲಿ, ರೋಹಿತ್ ಅಲ್ಲ, ಇನ್ಯಾರು?
ಮುಂಬೈ , ಶುಕ್ರವಾರ, 22 ಡಿಸೆಂಬರ್ 2023 (10:17 IST)
Photo Courtesy: Twitter
ಮುಂಬೈ: 2023 ನೇ ವರ್ಷ ಇನ್ನೇನು ಮುಗಿಯುತ್ತಾ ಬಂದಿದೆ. ಈ ವರ್ಷ ಭಾರತೀಯ ಕ್ರಿಕೆಟ್ ರಂಗದಲ್ಲಿ ಅನೇಕ ದಾಖಲೆಗಳು, ವಿಶೇಷ ಗಳಿಗೆಗಳು ಬಂದಿವೆ.

ಏಕದಿನ ಪಂದ್ಯಗಳಲ್ಲಿ ಈ ವರ್ಷ ಭಾರತಕ್ಕೆ ಇನ್ನು ಯಾವುದೇ ಪಂದ್ಯಗಳಿಲ್ಲ. ಈ ವರ್ಷದಲ್ಲಿ ಏಕದಿನ ಪಂದ್ಯಗಳಲ್ಲಿ ಭಾರತದ ಪರ ಅತ್ಯಧಿಕ ರನ್ ಗಳಿಸಿದ ಆಟಗಾರ ಯಾರು ಗೊತ್ತಾ? ಖಂಡಿತಾ ರನ್ ಮೆಷಿನ್‍ ಕೊಹ್ಲಿ, ರೋಹಿತ್ ಶರ್ಮಾ ಅಲ್ಲ.

ಭಾರತದ ಭವಿಷ್ಯದ ಸ್ಟಾರ್ ಶುಬ್ಮನ್ ಗಿಲ್ ಈ ವರ್ಷ ಏಕದಿನ ಪಂದ್ಯಗಳಲ್ಲಿ ಅತ್ಯಧಿಕ ರನ್ ಗಳಿಸಿದ ಆಟಗಾರ. ಗಿಲ್ ಈ ವರ್ಷ ಒಟ್ಟು 1584 ರನ್ ಗಳಿಸಿ ಭಾರತದ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡಿದ್ದಾರೆ.

ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವುದು ವಿರಾಟ್ ಕೊಹ್ಲಿ. ಅವರು ಒಟ್ಟು 1377 ರನ್ ಗಳಿಸಿದ್ದಾರೆ. ಮೂರನೇ ಸ್ಥಾನದಲ್ಲಿರುವ ನಾಯಕ ರೋಹಿತ್ ಶರ್ಮಾ ಗಳಿಸಿದ್ದು 1255 ರನ್. 1060 ರನ್ ಗಳಿಸಿರುವ ಕೆಎಲ್ ರಾಹುಲ್ ಗೆ ನಾಲ್ಕನೇ ಸ್ಥಾನ. ಟಾಪ್ ಸ್ಥಾನಗಳಲ್ಲಿ ಭಾರತದ ಟಾಪ್ ನಾಲ್ವರು ಸ್ಟಾರ್ ಆಟಗಾರರೇ ಇರುವುದು ವಿಶೇಷ.


Share this Story:

Follow Webdunia kannada

ಮುಂದಿನ ಸುದ್ದಿ

ಪುಟಾಣಿ ಅಭಿಮಾನಿಗೆ ಪ್ಯಾಡ್ ಗಿಫ್ಟ್ ಕೊಟ್ಟ ಕೆಎಲ್ ರಾಹುಲ್