Select Your Language

Notifications

webdunia
webdunia
webdunia
webdunia

ವರ್ಷದ ಹಿನ್ನೋಟ: 2023 ರಲ್ಲಿ ಏಕದಿನ ಪಂದ್ಯಗಳಲ್ಲಿ ಗರಿಷ್ಠ ಶತಕ ಗಳಿಸಿದ ಕ್ರಿಕೆಟಿಗ ಯಾರು?

ವರ್ಷದ ಹಿನ್ನೋಟ: 2023 ರಲ್ಲಿ ಏಕದಿನ ಪಂದ್ಯಗಳಲ್ಲಿ ಗರಿಷ್ಠ ಶತಕ ಗಳಿಸಿದ ಕ್ರಿಕೆಟಿಗ ಯಾರು?
ಮುಂಬೈ , ಶನಿವಾರ, 23 ಡಿಸೆಂಬರ್ 2023 (10:10 IST)
ಮುಂಬೈ: 2023 ಇನ್ನೇನು ಮುಗಿಯುತ್ತಾ ಬಂದಿದೆ. ಟೀಂ ಇಂಡಿಯಾದ ಈ ವರ್ಷದ ಏಕದಿನ ಸರಣಿ ಆಫ್ರಿಕಾ ಸರಣಿಯೊಂದಿಗೆ ಕೊನೆಗೊಂಡಿದೆ.

ಇದೀಗ 2023 ರ ಸಾಲಿನಲ್ಲಿ ಏಕದಿನ ಪಂದ್ಯಗಳಲ್ಲಿ ಅತೀ ಹೆಚ್ಚು ಶತಕ ಬಾರಿಸಿದವರು ಯಾರು ಮತ್ತು ಎಷ್ಟು ಎಂಬ ಭಾರತೀಯ ಆಟಗಾರರ ಪಟ್ಟಿ ನೋಡೋಣ.

ಭಾರತದ ಪರ ಮಾತ್ರವಲ್ಲ, ಸದ್ಯದ ಮಟ್ಟಿಗೆ ವಿಶ್ವ ಕ್ರಿಕೆಟಿಗರ ಪಟ್ಟಿಯಲ್ಲೂ ಏಕದಿನ ಪಂದ್ಯಗಳಲ್ಲಿ ಈ ವರ್ಷ ಹೆಚ್ಚು ಶತಕ ಗಳಿಸಿದ ಆಟಗಾರನೆಂದರೆ ವಿರಾಟ್ ಕೊಹ್ಲಿ. ಅವರು ಈ ವರ್ಷ ಒಟ್ಟು 6 ಶತಕ ಗಳಿಸಿದ್ದಾರೆ. ಎರಡನೇ ಸ್ಥಾನದಲ್ಲಿ ಜಾಗತಿಕವಾಗಿ ನ್ಯೂಜಿಲೆಂಡ್ ನ ಡೆರಿಲ್ ಮಿಚೆಲ್ ಮತ್ತು ಭಾರತದ ಶುಬ್ಮನ್ ಗಿಲ್ ಇದ್ದಾರೆ.

ಕಳೆದ ವರ್ಷ ವಿರಾಟ್ ಕೊಹ್ಲಿಗೆ ಶತಕಗಳ ಬರವಿತ್ತು. ಆದರೆ ಈ ವರ್ಷ ಆರಂಭದಿಂದಲೇ ಅವರ ಬ್ಯಾಟ್ ಝಳಪಿಸಲು ಶುರು ಮಾಡಿದ್ದಾರೆ. ಆರಂಭದಲ್ಲೇ ಸಾಲು ಸಾಲು ಶತಕದ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ರಿಯಾಲಿಟಿ ಶೋಗಾಗಿ ಟೀಂ ಇಂಡಿಯಾಗೆ ಚಕ್ಕರ್? ಇಶಾನ್ ಕಿಶನ್ ವಿರುದ್ಧ ಭಾರೀ ಟೀಕೆ