Select Your Language

Notifications

webdunia
webdunia
webdunia
webdunia

IND v/s SA Boxing Day test: ಟಾಸ್ ಗೆದ್ದ ಆಫ್ರಿಕಾ, ಟೀಂ ಇಂಡಿಯಾ ಪರ ಪ್ರಸಿದ್ಧ ಕೃಷ್ಣ ಡೆಬ್ಯೂಟ್

ರೋಹಿತ್ ಶರ್ಮಾ
ಸೆಂಚೂರಿಯನ್: ಭಾರತ ಮತ್ತು ದ.ಆಫ್ರಿಕಾ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಆಫ್ರಿಕಾ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದೆ.

ಟೀಂ ಇಂಡಿಯಾ ಪರ ಈ ಪಂದ್ಯದ ಮೂಲಕ ಕನ್ನಡಿಗ ವೇಗಿ ಪ್ರಸಿದ್ಧ ಕೃಷ್ಣ ಪದಾರ್ಪಣೆ ಮಾಡಿದ್ದಾರೆ. ಅವರಿಗೆ ಜಸ್ಪ್ರೀತ್ ಬುಮ್ರಾ ಕ್ಯಾಪ್ ನೀಡಿ ಗೌರವಿಸಿದರು. ಮಳೆ ಬಂದು ಮೈದಾನ ಒದ್ದೆಯಾಗಿದ್ದರಿಂದ 15 ನಿಮಿಷ ತಡವಾಗಿ ಟಾಸ್ ನಡೆಯಿತು.

ಭಾರತ ತಂಡದಲ್ಲಿ ರವೀಂದ್ರ ಜಡೇಜಾಗೆ ವಿಶ್ರಾಂತಿ ನೀಡಲಾಗಿದೆ. ಬೆನ್ನು ನೋವಿನಿಂದ ಬಳಲುತ್ತಿರುವ ಕಾರಣಕ್ಕೆ ಜಡೇಜಾರನ್ನು ಹೊರಗಿಡಲಾಗಿದೆ ಎಂದು ನಾಯಕ ರೋಹಿತ್ ತಿಳಿಸಿದ್ದಾರೆ. ಹಿರಿಯ ಸ್ಪಿನ್ನರ್ ಅಶ್ವಿನ್ ರನ್ನು ಉಳಿಸಿಕೊಳ್ಳಲಾಗಿದೆ. ವೇಗದ ಬೌಲಿಂಗ್ ನಾಲ್ವರು ಕಣಕ್ಕಿಳಿಯುತ್ತಿದ್ದಾರೆ. ಬ್ಯಾಟಿಂಗ್ ನಲ್ಲಿ ರೋಹಿತ್ ಜೊತೆಗೆ ಯಶಸ್ವಿ ಜೈಸ್ವಾಲ್ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ. ಗಿಲ್ ಮೂರು ಮತ್ತು ಕೊಹ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ. ವಿಕೆಟ್ ಕೀಪರ್ ಆಗಿ ನಿರೀಕ್ಷೆಯಂತೇ ಕೆಎಲ್ ರಾಹುಲ್ ಗೆ ಅವಕಾಶ ಸಿಕ್ಕಿದೆ. ಉಳಿದಂತೆ ಶ್ರೇಯಸ್ ಅಯ್ಯರ್ ತಂಡದಲ್ಲಿದ್ದಾರೆ.

ಭಾರತ ತಂಡ ಇಂತಿದೆ: ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಬ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ ಕೃಷ್ಣ.

Share this Story:

Follow Webdunia kannada

ಮುಂದಿನ ಸುದ್ದಿ

ಕೆಎಲ್ ರಾಹುಲ್ ವಿಚಾರದಲ್ಲಿ ಪಕ್ಷಪಾತ ಮಾಡುತ್ತಿದ್ದಾರೆಯೇ ಕೋಚ್ ದ್ರಾವಿಡ್?