Publish Date: Tue, 26 Dec 2023 (08:20 IST)
Updated Date: Tue, 26 Dec 2023 (08:40 IST)
ಸೆಂಚೂರಿಯನ್: ಭಾರತ ಮತ್ತು ದ.ಆಫ್ರಿಕಾ ನಡುವೆ ಇಂದಿನಿಂದ ಬಾಕ್ಸಿಂಗ್ ಡೇ ಟೆಸ್ಟ್ ಸರಣಿಯ ಮೊದಲ ಪಂದ್ಯ ಆರಂಭವಾಗಲಿದೆ.
ಸೆಂಚೂರಿಯನ್ ಮೈದಾನದಲ್ಲಿ ಪಂದ್ಯ ನಡೆಯಲಿದೆ. ದ.ಆಫ್ರಿಕಾ ನೆಲದಲ್ಲಿ ಇದುವರೆಗೆ ಸಿಕ್ಕದ ಟೆಸ್ಟ್ ಸರಣಿ ಗೆಲುವು ಹುಡುಕಿ ರೋಹಿತ್ ಶರ್ಮಾ ಪಡೆ ಕಣಕ್ಕಿಳಿಯುತ್ತಿದೆ.
ಈ ಟೆಸ್ಟ್ ಪಂದ್ಯಕ್ಕೆ ಭಾರತ ತಂಡದಲ್ಲಿ ಆರಂಭಿಕರಾಗಿ ರೋಹಿತ್ ಜೊತೆಗೆ ಗಿಲ್ ಕಣಕ್ಕಿಳಿಯುವುದು ಖಚಿತ. ಮೂರನೇ ಕ್ರಮಾಂಕದಲ್ಲಿ ಕೊಹ್ಲಿ, ನಾಲ್ಕನೇ ಕ್ರಮಾಂಕಕ್ಕೆ ಶ್ರೇಯಸ್ ಅಯ್ಯರ್, ಐದನೇ ಕ್ರಮಾಂಕಕ್ಕೆ ವಿಕೆಟ್ ಕೀಪರ್ ಪ್ಲಸ್ ಬ್ಯಾಟಿಗನಾಗಿ ಕೆಎಲ್ ರಾಹುಲ್ ಆಯ್ಕೆಯಾಗಲಿದ್ದಾರೆ.
ಭಾರತ ತಂಡದ ಸ್ಪಿನ್ ಅಸ್ತ್ರಗಳಾದ ರವಿಚಂದ್ರನ್ ಅಶ್ವಿನ್-ಜಡೇಜಾ ಜೋಡಿ ಕಣಕ್ಕಿಳಿಯಬಹುದು. ಉಳಿದಂತೆ ವೇಗಿಗಳ ವಿಭಾಗದಲ್ಲಿ ಶಮಿ ಅನುಪಸ್ಥಿತಿಯಲ್ಲಿ ಶಾರ್ದೂಲ್ ಠಾಕೂರ್ ಗೆ ಅವಕಾಶ ಸಿಗಬಹುದು. ಈ ಪಂದ್ಯ ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 1.30 ಕ್ಕೆ ಆರಂಭವಾಗಲಿದೆ. ಪಂದ್ಯದ ನೇರಪ್ರಸಾರವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್ ವರ್ಕ್ ಮತ್ತು ಡಿಸ್ನಿ ಹಾಟ್ ಸ್ಟಾರ್ ಆಪ್ ನಲ್ಲಿ ವೀಕ್ಷಿಸಬಹುದು.