Select Your Language

Notifications

webdunia
webdunia
webdunia
webdunia

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

ಭಾರತ-ಆಸ್ಟ್ರೇಲಿಯಾ ಮಹಿಳೆಯರ ಏಕದಿನ
ಮುಂಬೈ , ಭಾನುವಾರ, 31 ಡಿಸೆಂಬರ್ 2023 (09:49 IST)
Photo Courtesy: Twitter
ಮುಂಬೈ: ಆಸ್ಟ್ರೇಲಿಯಾ ವನಿತೆಯರ ವಿರುದ್ಧ ನಡೆದ ಏಕದಿನ ಪಂದ್ಯದಲ್ಲಿ ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹ ರಾಣಾಗೆ ಗಂಭೀರ ಗಾಯವಾಗಿದೆ.

ಎರಡನೇ ಏಕದಿನ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ಸ್ನೇಹ ರಾಣಾ ಬಿದ್ದು, ತಲೆಗೆ ಪೆಟ್ಟು ಮಾಡಿಕೊಂಡಿದ್ದಾರೆ. ತಲೆ ನೋವಿಗೊಳಗಾದ ಅವರನ್ನು ತಕ್ಷಣವೇ ಮೈದಾನದಿಂದ ಹೊರಗೆ ಕರೆದೊಯ್ಯಲಾಯಿತು.

ಬಳಿಕ ಅವರು ಮೈದಾನಕ್ಕೆ ಬರಲಿಲ್ಲ. ಅವರನ್ನು ತಕ್ಷಣವೇ ಸ್ಕ್ಯಾನಿಂಗ್ ಗೆ ಕಳುಹಿಸಲಾಗಿದೆ. ಸ್ನೇಹ ರಾಣಾ ಬದಲಿಗೆ ಹರ್ಲಿನ್ ಡಿಯೋಲ್ ಫೀಲ್ಡಿಂಗ್ ಮಾಡಿದರು.

ಪಂದ್ಯದ ಬಳಿಕ ಈ ಬಗ್ಗೆ ಮಾತನಾಡಿದ ನಾಯಕಿ ಹರ್ಮನ್ ಪ್ರೀತ್ ಕೌರ್, ಫೀಲ್ಡಿಂಗ್ ಮಾಡುವಾಗ ಇಬ್ಬರು ಆಟಗಾರ್ತಿಯರು ಢಿಕ್ಕಿ ಹೊಡೆದಿದ್ದಾರೆ. ಕೆಲವು ಸಮಯದ ಬಳಿಕ ಸ್ನೇಹ ತಲೆನೋವಾಗುತ್ತಿದೆ ಎಂದಿದ್ದಾರೆ. ಹೀಗಾಗಿ ಅವರನ್ನು ಕರೆದೊಯ್ಯಲಾಗಿದೆ ಎಂದಿದ್ದಾರೆ. ಈ ಪಂದ್ಯವನ್ನು ಭಾರತ 3 ರನ್ ಗಳಿಂದ ಸೋತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ