Publish Date: Sat, 30 Dec 2023 (10:57 IST)
Updated Date: Sat, 30 Dec 2023 (10:58 IST)
ರಾಂಚಿ: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಅಭಿಮಾನಿಯೊಬ್ಬರಿಗೆ ಉತ್ತಮ ಆಹಾರ ಬೇಕೆಂದರೆ ಪಾಕಿಸ್ತಾನಕ್ಕೆ ಹೋಗಿ ಎಂದು ಸಲಹೆ ನೀಡಿದ್ದಾರೆ.
ಧೋನಿ ಆಹಾರ ಪ್ರಿಯ ಎಂದು ಎಲ್ಲರಿಗೂ ಗೊತ್ತು. ಅವರು ಆಗಾಗ ರೆಸ್ಟೋರೆಂಟ್ ಗಳಲ್ಲಿ ಕಾಣಿಸಿಕೊಳ್ಳುವುದು ಇದಕ್ಕೆ ಸಾಕ್ಷಿ. ಇದೀಗ ಅಭಿಮಾನಿಯೊಬ್ಬರಿಗೆ ಉತ್ತಮ ತಿಂಡಿ-ತಿನಿಸು ಬೇಕೆಂದರೆ ಪಾಕಿಸ್ತಾನಕ್ಕೆ ಹೋಗಿ. ಅಲ್ಲಿ ಅತ್ಯುತ್ತಮ ಆಹಾರ ಸಿಗುತ್ತದೆ ಎಂದು ಸಲಹೆ ನೀಡಿರುವ ವಿಡಿಯೋವೊಂದು ವೈರಲ್ ಆಗಿದೆ.
ಆದರೆ ಧೋನಿ ಹೀಗೆ ಸಲಹೆ ನೀಡಿದಾಗ ಆ ಅಭಿಮಾನಿ ನೀಡಿದ ಉತ್ತರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ನನಗೆ ಆಹಾರವೆಂದರೆ ಇಷ್ಟ. ಆದರೆ ಆಹಾರಕ್ಕಾಗಿ ನಾನು ಖಂಡಿತಾ ಪಾಕಿಸ್ತಾನಕ್ಕೆ ಹೋಗುವುದಿಲ್ಲ ಎಂದು ಆ ಅಭಿಮಾನಿ ಉತ್ತರಿಸುತ್ತಾರೆ.
ಅದಕ್ಕೆ ಧೋನಿ ನಗುವಿನ ಪ್ರತಿಕ್ರಿಯೆ ನೀಡುತ್ತಾರೆ. ಧೋನಿಯ ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಪರ-ವಿರೋಧ ಚರ್ಚೆಗೆ ಕಾರಣವಾಗಿದೆ.