ಕೇಪ್ ಟೌನ್: ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಒಂದಾದ ಮೇಲೊಂದರಂತೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಅವರ ದಾಖಲೆ ಮೇಲೆ ಮುರಿಯುತ್ತಿದ್ದಾರೆ.
ಭಾರತ ಮತ್ತು ದ.ಆಫ್ರಿಕಾ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಅರ್ಧಶತಕ ಗಳಿಸಿದ ವಿರಾಟ್ ಕೊಹ್ಲಿ ಈ ವರ್ಷ 2000 ರನ್ ಪೂರೈಸಿದ ದಾಖಲೆ ಮಾಡಿದ್ದರು. ಇದು ಏಳನೇ ಬಾರಿಗೆ ಅವರು ಈ ದಾಖಲೆ ಮಾಡುತ್ತಿದ್ದಾರೆ.
ಈಗ ಎರಡನೇ ಟೆಸ್ಟ್ ಪಂದ್ಯದಲ್ಲಿ ಸಚಿನ್ ತೆಂಡುಲ್ಕರ್ ಅವರ ವಿಶ್ವದಾಖಲೆಯೊಂದನ್ನು ಮುರಿಯುವ ಹಂತದಲ್ಲಿದ್ದಾರೆ. ಇನ್ನೊಂದು ಅರ್ಧಶತಕ ಸಿಡಿಸಿದರೆ ಕೊಹ್ಲಿ ದಾಖಲೆ ಮಾಡಲಿದ್ದಾರೆ.
ಸೌತ್ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್, ಆಸ್ಟ್ರೇಲಿಯಾದಂತಹ ಪ್ರಮುಖ ಟೆಸ್ಟ್ ಆಡುವ ರಾಷ್ಟ್ರಗಳ ವಿರುದ್ಧ ಗರಿಷ್ಠ ಅರ್ಧಶತಕ ಗಳಿಸಿದ ದಾಖಲೆ ಈಗ ಸಚಿನ್ ಹೆಸರಿನಲ್ಲಿದೆ. ಸಚಿನ್ ಒಟ್ಟು 74 ಬಾರಿ ಸಚಿನ್ ಅರ್ಧಶತಕ ಗಳಿಸಿದ್ದಾರೆ. ಕೊಹ್ಲಿ ಈಗ 73 ಬಾರಿ ಈ ರಾಷ್ಟ್ರಗಳ ವಿರುದ್ಧ ಅರ್ಧಶತಕ ಗಳಿಸಿದ್ದಾರೆ. ಜನವರಿ 3 ರಿಂದ ಎರಡನೇ ಟೆಸ್ಟ್ ಪಂದ್ಯ ಆರಂಭವಾಗಲಿದೆ.