ಸೆಂಚೂರಿಯನ್: ದ.ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಹೀನಾಯ ಸೋಲು ಕಂಡ ಟೀಂ ಇಂಡಿಯಾಗೆ ಸೋಲಿನ ಜೊತೆ ದಂಡದ ಬರೆ ಸಿಕ್ಕಿದೆ.
									
			
			 
 			
 
 			
					
			        							
								
																	ಮೊದಲ ಟೆಸ್ಟ್ ಪಂದ್ಯವನ್ನು ಟೀಂ ಇಂಡಿಯಾ ಇನಿಂಗ್ಸ್ ಅಂತರದಿಂದ ಸೋಲು ಕಂಡಿತ್ತು. ಈ ಪಂದ್ಯ ಮೂರೇ ದಿನದಲ್ಲಿ ಮುಕ್ತಾಯ ಕಂಡಿತ್ತು. ಹಾಗಿದ್ದರೂ ಟೀಂ ಇಂಡಿಯಾಗೆ ನಿಧಾನಗತಿಯ ಓವರ್ ಮಾಡಿದ್ದಕ್ಕೆ ಶಿಕ್ಷೆ ಸಿಕ್ಕಿದೆ.
									
										
								
																	ಭಾರತ ತಂಡ ನಿಗದಿತ ಸಮಯಕ್ಕಿಂತ ಎರಡು ಓವರ್ ಗಳಷ್ಟು ಹಿನ್ನಡೆಯಲ್ಲಿತ್ತು. ಈ ಕಾರಣಕ್ಕೆ ಐಸಿಸಿ ತಂಡಕ್ಕೆ ಶೇ.10 ರಷ್ಟು ಸಂಭಾವನೆ ಕಡಿತದ ಶಿಕ್ಷೆ ನೀಡಿದೆ. ಮ್ಯಾಚ್ ರೆಫರಿ ಮತ್ತು ಅಂಪಾಯರ್ ಗಳ ಅನುಮೋದನೆ ಮೇರೆಗೆ ಶಿಕ್ಷೆ ವಿಧಿಸಲಾಗಿದೆ.
									
											
							                     
							
							
			        							
								
																	ಈ ಟೆಸ್ಟ್ ಪಂದ್ಯದ ಸೋಲಿನಿಂದ ಟೀಂ ಇಂಡಿಯಾ ದಂಡ ಮಾತ್ರವಲ್ಲ, ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್ ಅಂಕಪಟ್ಟಿಯಲ್ಲಿ ಕುಸಿತ ಕಂಡಿದ್ದು, ಇದೀಗ ಐದನೇ ಸ್ಥಾನಕ್ಕೆ ಜಾರಿದೆ.