Select Your Language

Notifications

webdunia
webdunia
webdunia
webdunia

INDvsSA test: ಗ್ರೀನ್ ಪಿಚ್ ಆತಂಕದ ನಡುವೆ ಟೀಂ ಇಂಡಿಯಾಗೆ ಗೆಲ್ಲುವ ಒತ್ತಡ

INDvsSA test: ಗ್ರೀನ್ ಪಿಚ್ ಆತಂಕದ ನಡುವೆ ಟೀಂ ಇಂಡಿಯಾಗೆ ಗೆಲ್ಲುವ ಒತ್ತಡ
ಕೇಪ್ ಟೌನ್ , ಬುಧವಾರ, 3 ಜನವರಿ 2024 (08:20 IST)
ಕೇಪ್ ಟೌನ್:  ಭಾರತ ಮತ್ತು ದ.ಆಫ್ರಿಕಾ ನಡುವೆ ಇಂದಿನಿಂದ ಕೇಪ್ ಟೌನ್ ಮೈದಾನದಲ್ಲಿ ದ್ವಿತೀಯ ಟೆಸ್ಟ್ ಪಂದ್ಯ ನಡೆಯಲಿದೆ.

ಮೊದಲ ಟೆಸ್ಟ್ ಪಂದ್ಯವನ್ನು ಸೋತಿದ್ದರಿಂದ ಟೀಂ ಇಂಡಿಯಾಗೆ ಇಂದಿನ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡವಿದೆ. ಜೊತೆಗೆ ಗ್ರೀನ್ ಪಿಚ್‍ ಸಿದ್ಧವಾಗಿದ್ದು, ಭಾರತಕ್ಕೆ ಆತಂಕವೂ ಇದೆ.

ಇನ್ನೊಂದು ಆತಂಕಕಾರೀ ವಿಷಯವೆಂದರೆ ಕೇಪ್ ಟೌನ್ ಅಂಗಣದಲ್ಲಿ ಟೀಂ ಇಂಡಿಯಾ ಟೆಸ್ಟ್ ದಾಖಲೆ ಅಷ್ಟೊಂದು ಉತ್ತಮವಾಗಿಲ್ಲ. ಆಡಿದ ಆರು ಪಂದ್ಯಗಳ ಪೈಕಿ ಇಲ್ಲಿ ನಾಲ್ಕರಲ್ಲಿ ಸೋಲು ಕಂಡಿದೆ. ಎರಡು ಬಾರಿ ಡ್ರಾ ಸಾಧಿಸಲು ಮಾತ್ರ ಸಾಧ್ಯವಾಗಿದೆ.

ಸದ್ಯದ ಪರಿಸ್ಥಿತಿಯಲ್ಲಿ ಇಲ್ಲಿನ ಗ್ರೀನ್ ಪಿಚ್ ನಲ್ಲಿ ಭಾರತ ಗೆಲ್ಲಬೇಕಾದರೆ ಎಲ್ಲಾ ವಿಭಾಗಗಳಲ್ಲೂ ಯೋಜನಾಬದ್ಧವಾಗಿ ಆಡಬೇಕಿದೆ. ಬ್ಯಾಟಿಂಗ್ ಸುಧಾರಣೆಯತ್ತ ಗಮನಹರಿಸಬೇಕು. ಕೊನೆಯ ಎರಡು ದಿನಗಳು ಸ್ಪಿನ್ನರ್ ಗಳಿಗೂ ಸಹಕಾರಿಯಾಗಬಹುದು ಎಂಬ ವರದಿಯಿದ್ದು, ಟೀಂ ಇಂಡಿಯಾಗೆ ಇದು ಕೊಂಚ ಸಮಧಾನಕರ ವಿಚಾರವಾಗಿದೆ. ಇಲ್ಲಿ ಭಾರತ ಗಳಿಸಿದ ಗರಿಷ್ಠ ಮೊತ್ತವೆಂದರೆ 414 ರನ್.  ವೇಗಿ ಜಸ್ಪ್ರೀತ್ ಬುಮ್ರಾ ಒಮ್ಮೆ ಇಲ್ಲಿ 5 ವಿಕೆಟ್ ಕಬಳಿಸಿದ ದಾಖಲೆಯನ್ನೂ ಮಾಡಿದ್ದಾರೆ. ಹೀಗಾಗಿ ಭಾರತಕ್ಕೆ ತನ್ನ ದಾಖಲೆ ಉತ್ತಮಪಡಿಸಲು ಇದೊಂದು ಉತ್ತಮ ವೇದಿಕೆ ಎನ್ನಬಹುದು. ಈ ಪಂದ್ಯ ಭಾರತೀಯ ಕಾಲಮಾನ ಪ್ರಕಾರ ಮಧ್ಯಾಹ್ನ 1.30 ಕ್ಕೆ ಆರಂಭವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿರಾಟ್ ಕೊಹ್ಲಿ ರೆಸ್ಟೋರೆಂಟ್ ನಲ್ಲಿ ಮಹಿಳಾ ಆಟಗಾರ್ತಿ ಶ್ರೇಯಾಂಕ ಪಾಟೀಲ್ ನ್ಯೂ ಇಯರ್ ಪಾರ್ಟಿ