Select Your Language

Notifications

webdunia
webdunia
webdunia
webdunia

IPL 2024: ಮತ್ತೆ ಆರ್ ಸಿಬಿಗೆ ವಿರಾಟ್ ಕೊಹ್ಲಿಯೇ ನಾಯಕ?

IPL 2024: ಮತ್ತೆ ಆರ್ ಸಿಬಿಗೆ ವಿರಾಟ್ ಕೊಹ್ಲಿಯೇ ನಾಯಕ?
ಬೆಂಗಳೂರು , ಬುಧವಾರ, 3 ಜನವರಿ 2024 (08:40 IST)
ಬೆಂಗಳೂರು: ಐಪಿಎಲ್ ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮತ್ತೆ ವಿರಾಟ್ ಕೊಹ್ಲಿಯೇ ನಾಯಕನಾಗಲಿದ್ದಾರೆಯೇ? ಹೀಗೊಂದು ಸುದ್ದಿ ಬಲವಾಗಿ ಹರಿದಾಡುತ್ತಿದೆ.

ಕಳೆದ ಸೀಸನ್ ನಲ್ಲಿ ಆರ್ ಸಿಬಿ ಆಫ್ರಿಕಾ ಮೂಲದ ಫಾ ಡು ಪ್ಲೆಸಿಸ್ ನಾಯಕತ್ವದಲ್ಲಿ ಆಡಿತ್ತು. ಆದರೆ ಆಗಲೂ ತಂಡ ಕಪ್ ಗೆದ್ದಿರಲಿಲ್ಲ. ಹೀಗಾಗಿ ಮತ್ತೆ ಕೊಹ್ಲಿಯೇ ನಾಯಕರಾಗಬೇಕು, ಅವರ ನಾಯಕತ್ವದಲ್ಲಿ ಕಪ್ ಗೆಲ್ಲುವುದನ್ನು ನೋಡಬೇಕು ಎಂದು ಅಭಿಮಾನಿಗಳು ಬಯಸಿದ್ದರು.

ಇದೀಗ ಅಭಿಮಾನಿಗಳ ಬಯಕೆ ಈಡೇರುವ ಲಕ್ಷಣ ತೋರುತ್ತಿದೆ. ಪ್ರತೀ ಬಾರಿಯೂ ಈ ಸಲ ಕಪ್ ನಮ್ಮದೇ ಎಂಬ ಘೋಷವಾಕ್ಯದೊಂದಿಗೆ ತಂಡ ಕಣಕ್ಕಿಳಿಯುತ್ತದೆ. ಆದರೆ ಇದುವರೆಗೆ ಕಪ್ ಗೆದ್ದಿಲ್ಲ. ಒಂದು ವೇಳೆ ಗೆದ್ದರೆ ಅದು ಕೊಹ್ಲಿ ನಾಯಕತ್ವದಲ್ಲಿ ಆಗಿರಬೇಕು ಎಂಬುದು ಅಭಿಮಾನಿಗಳ ಬಯಕೆ.

ಅಲ್ಲದೆ, 39 ವರ್ಷ ಫಾ ಡು ಪ್ಲೆಸಿಸ್ ನಾಯಕತ್ವದಲ್ಲಿ ಇದುವರೆಗೆ ಫೈನಲ್ ಕೂಡಾ ಪ್ರವೇಶಿಸಿಲ್ಲ. ಹೀಗಾಗಿ ಆರ್ ಸಿಬಿ ಮತ್ತೆ ಕಿಂಗ್ ಕೊಹ್ಲಿಯನ್ನೇ ನಾಯಕರಾಗಿ ನೇಮಕ ಮಾಡುವ ಬಗ್ಗೆ ಚಿಂತನೆ ನಡೆಸಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

INDvsSA test: ಗ್ರೀನ್ ಪಿಚ್ ಆತಂಕದ ನಡುವೆ ಟೀಂ ಇಂಡಿಯಾಗೆ ಗೆಲ್ಲುವ ಒತ್ತಡ