ಕೇಪ್ ಟೌನ್: ದ.ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ ಮುಗಿದ ಬೆನ್ನಲ್ಲೇ ಟೀಂ ಇಂಡಿಯಾ ಕೆಲವು ಕ್ರಿಕೆಟಿಗರು ತವರಿಗೆ ಮರಳಿದ್ದರೆ ಮತ್ತೆ ಕೆಲವು ಕ್ರಿಕೆಟಿಗರು ಅಲ್ಲಿಯೇ ಉಳಿದುಕೊಂಡಿದ್ದಾರೆ.
ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟಿಗ ಕೆಎಲ್ ರಾಹುಲ್ ತಮ್ಮ ಪತ್ನಿ ಅಥಿಯಾ ಜೊತೆ ಆಫ್ರಿಕಾದ ಸುಂದರ ಕಡಲ ತೀರದಲ್ಲಿ ರೊಮ್ಯಾಂಟಿಕ್ ಹಾಲಿಡೇ ಮಾಡುತ್ತಿದ್ದಾರೆ.
ಬಿಡುವಿಲ್ಲದ ಕ್ರಿಕೆಟ್ ನಿಂದಾಗಿ ಟೀಂ ಇಂಡಿಯಾ ಕ್ರಿಕೆಟಿಗರಿಗೆ ಈ ಬಾರಿ ಹೊಸ ವರ್ಷಾಚರಣೆಯನ್ನು ತಮ್ಮ ಕುಟುಂಬದೊಂದಿಗೆ ಸಂಭ್ರಮಿಸಲು ಅವಕಾಶ ಸಿಕ್ಕಿರಲಿಲ್ಲ. ಆದರೆ ಬೇಗನೇ ಟೆಸ್ಟ್ ಪಂದ್ಯ ಮುಗಿದಿದ್ದರಿಂದ ಕ್ರಿಕೆಟಿಗರಿಗೆ ಲಾಭವಾಗಿದೆ.
ತಮಗೆ ಸಿಕ್ಕ ಕಿರು ಅವಧಿಯ ಬ್ರೇಕ್ ನಡುವೆ ಕೆಎಲ್ ರಾಹುಲ್-ಅಥಿಯಾ ಪ್ರಕೃತಿ ಸೌಂದರ್ಯ ಸವಿಯುತ್ತಾ ಜೊತೆಯಾಗಿ ಕಾಲ ಕಳೆಯುತ್ತಿದ್ದಾರೆ. ಈ ಕ್ಷಣಗಳನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇತ್ತೀಚೆಗಷ್ಟೇ ನಡೆದಿದ್ದ ಆಫ್ರಿಕಾ ಸರಣಿಯಲ್ಲಿ ಕೆಎಲ್ ರಾಹುಲ್ ಅದ್ಭುತ ಪ್ರದರ್ಶನ ನೀಡಿದ್ದರು.