Select Your Language

Notifications

webdunia
webdunia
webdunia
webdunia

ಮಾಲ್ಡೀವ್ಸ್ ನಿಂದ ಪ್ರಧಾನಿ ಮೋದಿಗೆ ಅವಮಾನ: ಕ್ರಿಕೆಟಿಗ ಮೊಹಮ್ಮದ್ ಶಮಿ ಹೇಳಿದ್ದೇನು?

Mohammad Shami

Krishnaveni K

ನವದೆಹಲಿ , ಬುಧವಾರ, 10 ಜನವರಿ 2024 (11:29 IST)
ನವದೆಹಲಿ: ದ್ವೀಪ ರಾಷ್ಟ್ರ ಮಾಲ್ಡೀವ್ಸ್, ಪ್ರಧಾನಿ ಮೋದಿ ಮತ್ತು ಭಾರತಕ್ಕೆ ಅವಮಾನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಿಕೆಟಿಗ ಮೊಹಮ್ಮದ್ ಶಮಿ ಪ್ರತಿಕ್ರಿಯಿಸಿದ್ದಾರೆ.

ರಾಷ್ಟ್ರಪತಿ ಭವನದಲ್ಲಿ ಅರ್ಜುನ ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು ಮಾಲ್ಡೀವ್ಸ್ ಘಟನೆ ಬಗ್ಗೆ ಮಾತನಾಡಿದ್ದಾರೆ. ಜೊತೆಗೆ ಭಾರತದ ಪ್ರವಾಸೋದ್ಯಮವನ್ನು ಪ್ರೋತ್ಸಾಹಿಸಬೇಕಿದೆ ಎಂದೂ ಹೇಳಿದ್ದಾರೆ.

‘ನಾವು ನಮ್ಮ ದೇಶದ ಪ್ರವಾಸೀ ತಾಣಗಳನ್ನು ಬೆಳೆಸಬೇಕಿದೆ. ಯಾವ ರೀತಿಯಿಂದ ಎನ್ನುವುದು ಮುಖ್ಯವಲ್ಲ, ನಮ್ಮ ದೇಶದ ಬೆಳವಣಿಗೆ ನಮಗೆ ಮುಖ್ಯ. ಪ್ರಧಾನಮಂತ್ರಿಗಳು ನಮ್ಮ ದೇಶವನ್ನು ಅಭಿವೃದ್ಧಿಗೆ ಕೊಂಡೊಯ್ಯಲು ಪ್ರಯತ್ನ ಮಾಡುತ್ತಿದ್ದಾರೆ. ಅವರಿಗೆ ನಾವು ಬೆಂಬಲ ಕೊಡಬೇಕು’ ಎಂದು ಮೊಹಮ್ಮದ್ ಶಮಿ ಹೇಳಿದ್ದಾರೆ.

ಇತ್ತೀಚೆಗೆ ಮಾಲ್ಡೀವ್ಸ್ ಸಚಿವರುಗಳು ಭಾರತೀಯ ಪ್ರಧಾನಿ ಲಕ್ಷದ್ವೀಪ ಭೇಟಿಯನ್ನು ಅಣಕಿಸಿದ್ದಲ್ಲದೆ, ಭಾರತೀಯ ಪ್ರವಾಸೀ ತಾಣಗಳು ಗಬ್ಬು ನಾರುತ್ತವೆ ಎಂದು ವ್ಯಂಗ್ಯ ಮಾಡಿದ್ದರು. ಈ ವಿಚಾರ ಈಗ ಎರಡೂ ದೇಶಗಳ ಸಂಬಂಧ ಹಳಸುವ ಮಟ್ಟಕ್ಕೆ ತಲುಪಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರೋಹಿತ್ ಶರ್ಮಾ ಇಫೆಕ್ಟ್: ಕೇಪ್ ಟೌನ್ ಪಿಚ್ ಗೆ ಐಸಿಸಿ ನೀಡಿದ ರೇಟಿಂಗ್ ಇದು!