Select Your Language

Notifications

webdunia
webdunia
webdunia
webdunia

ಭಾರತ ವಿರೋಧಿ ಹೇಳಿಕೆ: ಪಟ್ಟ ಕಳೆದುಕೊಳ್ಳುವ ಭೀತಿಯಲ್ಲಿ ಮಾಲ್ಡೀವ್ಸ್ ಅಧ್ಯ ಕ್ಷ

maldeev president

Krishnaveni K

ನವದೆಹಲಿ , ಮಂಗಳವಾರ, 9 ಜನವರಿ 2024 (13:16 IST)
ನವದೆಹಲಿ: ತನ್ನ ಸಹೋದ್ಯೋಗಿ ಸಚಿವರ ಭಾರತ ವಿರೋಧಿ ಹೇಳಿಕೆಯಿಂದಾಗಿ ಈಗ ಮಾಲ್ಡೀವ್ಸ್ ಅಧ‍್ಯಕ್ಷ ಮೊಹಮ್ಮದ್ ಮಯಿಝು ತಮ್ಮ ಪಟ್ಟ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.

ಭಾರತ ವಿರುದ್ಧ ಡೆಪ್ಯುಟಿ ಸಚಿವರ ಹೇಳಿಕೆಯಿಂದ ರಾಜತಾಂತ್ರಿಕವಾಗಿ ಸಂಬಂಧವೇ ಹಳಸಿದೆ. ಭಾರತವನ್ನು ಎದುರು ಹಾಕಿಕೊಂಡು ತನ್ನ ಪ್ರವಾಸೋದ್ಯಮದ ಆದಾಯಕ್ಕೂ ಮಾಲ್ಡೀವ್ಸ್ ಕಲ್ಲು ಹಾಕಿಕೊಂಡಿದೆ.

ಈ ಬೆಳವಣಿಗೆಯಿಂದ ಅಲ್ಲಿನ ವಿಪಕ್ಷಗಳು ಅಧ‍್ಯಕ್ಷ ಮೊಹಮ್ಮದ್ ಮೊಯಿಝು ವಿರುದ್ಧ ಸಿಡಿದೆದ್ದಿವೆ. ಅಲ್ಲದೆ, ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಕೈಗೊಳ್ಳಲು ನಿರ್ಧರಿಸಿವೆ.

ಭಾರತ ನಮ್ಮ ಪ್ರಮುಖ ಮಿತ್ರರಾಷ್ಟ್ರ. ನಮ್ಮ ದೇಶವು ಬಿಕ್ಕಟ್ಟಿನಿಂದ ಕೂಡಿದಾಗ ಸಹಾಯಕ್ಕೆ ಬಂದಿತ್ತು. ಪ್ರವಾಸೋದ್ಯಮದಲ್ಲೂ ಭಾರತ ಪ್ರಮುಖ ಪಾತ್ರವಹಿಸಿದೆ. ಹೀಗಾಗಿ ಭಾರತ ವಿರೋಧಿ ಹೇಳಿಕೆಗಳಿಂದ ಉಭಯ ದೇಶಗಳ ಸಂಬಂಧಕ್ಕೆ ಧಕ್ಕೆಯಾಗಿದೆ. ಇದೀಗ ಅಧ‍್ಯಕ್ಷ ಮೊಹಮ್ಮದ್ ಮೊಯಿಝು ತಾವೇ ಖುದ್ದಾಗಿ ಪ್ರಧಾನಿ ಮೋದಿ ಬಳಿ ತೆರಳಿ ಘಟನೆ ಬಗ್ಗೆ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಷ್ಟ್ರಪತಿ ದ್ರೌಪದಿ ಮುರ್ಮುರಿಂದ ಅರ್ಜುನ ಪ್ರಶಸ್ತಿ ಸ್ವೀಕರಿಸಿದ ಮೊಹಮ್ಮದ್ ಶಮಿ