Publish Date: Tue, 09 Jan 2024 (09:20 IST)
Updated Date: Tue, 09 Jan 2024 (09:22 IST)
ನವದೆಹಲಿ: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಕರ್ನಾಟಕದ ಉಡುಪಿ ಬೀಚ್ ನ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹೊಗಳಿದ್ದಾರೆ.
ಮಾಲ್ಡೀವ್ಸ್ ವಿರುದ್ಧ ಬಹಿಷ್ಕಾರ ಅಭಿಯಾನಕ್ಕೆ ಕೈ ಜೋಡಿಸಿರುವ ಸೆಹ್ವಾಗ್ ಉಡುಪಿ, ಪಾಂಡಿಚೇರಿ, ಅಂಡಮಾನ್ ಬೀಚ್ ಗಳು ಅತ್ಯಂತ ಸುಂದರವಾಗಿದೆ. ಅಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಬೇಕು ಎಂದು ಫೋಟೋ ಸಮೇತ ಸೆಹ್ವಾಗ್ ಬರೆದುಕೊಂಡಿದ್ದಾರೆ.
ವಿಶೇಷವೆಂದರೆ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಕೂಡಾ ಇದಕ್ಕೆ ಪ್ರತಿಕ್ರಿಯಿಸಿದ್ದು, ನಮ್ಮ ದೇಶದ ಪ್ರೇಕ್ಷಣೀಯ ಸ್ಥಳಗಳನ್ನು ಹುಡುಕಾಡುವುದಕ್ಕೆ ಇದು ಸೂಕ್ತ ಸಮಯ. ನಾನು ಅಂಡಮಾನ್ ಮತ್ತು ಲಕ್ಷದ್ವೀಪಕ್ಕೆ ಭೇಟಿ ನೀಡಿದ್ದೇನೆ. ಇವೆರಡೂ ಅತ್ಯುತ್ತಮ ಸ್ಥಳಗಳು ಎಂದು ಕೊಂಡಾಡಿದ್ದಾರೆ.
ಮಾಲ್ಡೀವ್ಸ್ ಬಹಿಷ್ಕಾರಕ್ಕೆ ಕ್ರಿಕೆಟಿಗ ಸಚಿನ್ ತೆಂಡುಲ್ಕರ್, ಸುರೇಶ್ ರೈನಾ, ಇರ್ಫಾನ್ ಪಠಾಣ್, ನಟ ಸಲ್ಮಾನ್ ಖಾನ್, ರಣವೀರ್ ಸಿಂಗ್, ಅಮಿತಾಭ್ ಬಚ್ಚನ್, ಕಂಗನಾ ರಣಾವತ್ ಮುಂತಾದವರು ಕೈ ಜೋಡಿಸಿದ್ದಾರೆ.