ನವದೆಹಲಿ: ಭಾರತ ವಿರೋಧಿ ನಡೆಯಿಂದಾಗಿ ಕೆಂಗಣ್ಣಿಗೆ ಗುರಿಯಾಗಿರುವ ಮಾಲ್ಡೀವ್ಸ್ ಗೆ ಈಗ ಟ್ವಿಟರಿಗರು ಮತ್ತೊಂದು ಶಾಕ್ ನೀಡಿದ್ದಾರೆ.
									
			
			 
 			
 
 			
					
			        							
								
																	ಸೋಷಿಯಲ್ ಮೀಡಿಯಾ ಎಕ್ಸ್ ಪೇಜ್ ನಲ್ಲಿ ಇಂದು ಬಾಯ್ಕಾಟ್ ಮಾಲ್ಡೀವ್ಸ್ ಟ್ರೆಂಡ್ ಆಗುತ್ತಿದೆ. ಇದಕ್ಕೆ ಭಾರತದ ವಿವಿಧ ಕ್ಷೇತ್ರದ ಸೆಲೆಬ್ರಿಟಿಗಳು, ಸೋಷಿಯಲ್ ಮೀಡಿಯಾ ಬಳಕೆದಾರರೂ ಕೈ ಜೋಡಿಸಿದ್ದಾರೆ.
									
										
								
																	ಪ್ರಧಾನಿ ಮೋದಿ ಲಕ್ಷದ್ವೀಪಕ್ಕೆ ಭೇಟಿ ನೀಡಿ ಅಲ್ಲಿನ ಪ್ರಾಕೃತಿ ಸೌಂದರ್ಯ ಯಾವ ಮಾಲ್ಡೀವ್ಸ್ ಗೂ ಕಮ್ಮಿಯಿಲ್ಲ ಎಂದು ಪೋಸ್ಟ್ ಮಾಡಿದ್ದೇ ಮಾಡಿದ್ದು, ಮಾಲ್ಡೀವ್ಸ್ ಕಣ‍್ಣು ಕೆಂಪಗಾಗಿಸಿದೆ. ಇತ್ತೀಚೆಗೆ ಭಾರತ ವಿರೋಧಿ ನಡೆ, ಭಾರತದ ವಿರುದ್ಧವೇ ಸೋಷಿಯಲ್ ಮೀಡಿಯಾದಲ್ಲಿ ಕಿಡಿ ಕಾರುತ್ತಿರುವ ಮಾಲ್ಡೀವ್ಸ್ ವಿರುದ್ಧ ಭಾರತೀಯರೂ ಬಹಿಷ್ಕಾರದ ಅಭಿಯಾನ ಶುರು ಮಾಡಿದ್ದಾರೆ.
									
											
							                     
							
							
			        							
								
																	ಮಾಲ್ಡೀವ್ಸ್ ಗೆ ಪ್ರವಾಸೋದ್ಯಮವೇ ಪ್ರಮುಖ ಆದಾಯ. ಅದರಲ್ಲೂ ಭಾರತೀಯರೇ ಹೆಚ್ಚು ಇಲ್ಲಿಗೆ ಪ್ರವಾಸಕ್ಕಾಗಿ ಭೇಟಿ ನೀಡುತ್ತಿದ್ದಾರೆ. ಆದರೆ ಈಗ ಮಾಲ್ಡೀವ್ಸ್ ಪ್ರವಾಸಿ ತಾಣಗಳನ್ನು ಬಹಿಷ್ಕಾರ ಅಭಿಯಾನ ಆರಂಭಿಸಲಾಗಿದ್ದು, ಇದು ಆ ದೇಶಕ್ಕೆ ಹೊಡೆತ ನೀಡೋದಂತೂ ಗ್ಯಾರಂಟಿ.
									
			                     
							
							
			        							
								
																	ಮಾಜಿ ಕ್ರಿಕೆಟಿಗ, ಕಾಮೆಂಟೇಟರ್ ಆಕಾಶ್ ಚೋಪ್ರಾ ಸೇರಿದಂತೆ ಸೆಲೆಬ್ರಿಟಿಗಳು ಸೋಷಿಯಲ್ ಮೀಡಿಯಾ ಪ್ರಭಾವಿ ವ್ಯಕ್ತಿಗಳೂ ಮಾಲ್ಡೀವ್ಸ್ ಬಹಿಷ್ಕಾರ ಅಭಿಯಾನಕ್ಕೆ ಕರೆ ನೀಡಿದ್ದಾರೆ.