Publish Date: Sat, 06 Jan 2024 (10:00 IST)
Updated Date: Sat, 06 Jan 2024 (10:11 IST)
ನವದೆಹಲಿ: ಇತ್ತೀಚೆಗೆ ಪ್ರಧಾನಿ ಮೋದಿ ಲಕ್ಷದ್ವೀಪಕ್ಕೆ ಭೇಟಿ ಕೊಟ್ಟು ಸಮುದ್ರಾಳದಲ್ಲಿ ಈಜಾಡಿದ ಕ್ಷಣಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.
ಇದಾದ ಬಳಿಕ ಈಗ ಜನರಿಗೆ ಲಕ್ಷದ್ವೀಪ ಪ್ರವಾಸದ ಬಗ್ಗೆ ಆಸಕ್ತಿ ಹೆಚ್ಚಾಗಿದೆ. ಮೋದಿ ಭೇಟಿ ಮತ್ತು ಅವರು ಪ್ರಕಟಿಸಿದ ಫೋಟೋಗಳನ್ನು ನೋಡಿದ ಬಳಿಕ ಜನ ಈಗ ಲಕ್ಷದ್ವೀಪದ ಬಗ್ಗೆ ಗೂಗಲ್ ನಲ್ಲಿ ಅತೀ ಹೆಚ್ಚು ಹುಡುಕಾಟ ನಡೆಸಿದ್ದಾರೆ.
ಸಾಮಾನ್ಯವಾಗಿ ಕಡಲ ತಡಿಯ ಸುಂದರ ನಗರಿಗೆ ಪ್ರವಾಸ ಮಾಡುವ ಯೋಜನೆಯಿದ್ದರೆ ಹೆಚ್ಚಿನವರಿಗೆ ಮೊದಲು ನೆನಪಾಗುವುದು ಮಾಲ್ಡೀವ್ಸ್. ಆದರೆ ಪ್ರಧಾನಿ ಮೋದಿ ಇತ್ತೀಚೆಗೆ ಲಕ್ಷದ್ವೀಪವೂ ಯಾವ ಮಾಲ್ಡೀವ್ಸ್ ಗೂ ಕಮ್ಮಿಯಿಲ್ಲ ಎಂದು ತೋರಿಸಿಕೊಟ್ಟಿದ್ದರು.
ಅವರ ಫೋಟೋ, ವಿಡಿಯೋಗಳಲ್ಲಿ ಕಂಡುಬಂದ ಸುಂದರ ತಾಣಗಳನ್ನು ನೋಡಿದ ಬಳಿಕ ಜನ ಭಾರೀ ಸಂಖ್ಯೆಯಲ್ಲಿ ಲಕ್ಷದ್ವೀಪದ ಬಗ್ಗೆ ಗೂಗಲ್ ನಲ್ಲಿ ಹುಡುಕಾಟ ನಡೆಸಿದ್ದಾರೆ. ಒಂದೇ ದಿನ 50,000 ಕ್ಕೂ ಅಧಿಕ ಮಂದಿ ಲಕ್ಷದ್ವೀಪದ ಬಗ್ಗೆ ಗೂಗಲ್ ಸರ್ಚ್ ಮಾಡಿದ್ದಾರೆ. ಹೀಗಾಗಿ ಮುಂದೊಂದು ದಿನ ಇದು ಪ್ರವಾಸಿಗರ ಹಾಟ್ ಸ್ಪಾಟ್ ಆಗಲಿದೆ.