Select Your Language

Notifications

webdunia
webdunia
webdunia
webdunia

ಶಿಕ್ಷಕರ ಕನಸಿಗೆ ಸುಪ್ರೀಂ ಕೋರ್ಟ್‌ ತಣ್ಣೀರು

ಶಿಕ್ಷಕರ ಕನಸಿಗೆ ಸುಪ್ರೀಂ ಕೋರ್ಟ್‌ ತಣ್ಣೀರು

geetha

ನವದೆಹಲಿ , ಶುಕ್ರವಾರ, 5 ಜನವರಿ 2024 (17:00 IST)
ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಮುಂದುವರೆಸಲು ಹೈಕೋರ್ಟ್‌ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್‌ ತಡೆಯಾಜ್ಞೆ ನೀಡಿದೆ. ಇದರಿಂದ ಉದ್ಯೋಗದ ಭರವಸೆಯಲ್ಲಿದ್ದ 13 ಸಾವಿರಕ್ಕೂ ಹೆಚ್ಚು ಮಂದಿ ಅಭ್ಯರ್ಥಿಗಳ ಕನಸಿಗೆ ತಣ್ಣೀರೆರೆಚದಂತಾಗಿದೆ.ಆಯ್ಕೆ ಪ್ರಕ್ರಿಯೆಯಲ್ಲಿ ತೇರ್ಗಡೆಯಾಗಿದ್ದ ಅಭ್ಯರ್ಥಿಗಳಿಗೆ ಈಗಾಗಲೇ ನೇಮಕಾತಿ ಪತ್ರ ವಿತರಣೆಯೂ ಸಹ ಪ್ರಾರಂಭವಾಗಿತ್ತು.

ಸುಮಾರು  ಶೇ 80 ರಷ್ಟು ನೇಮಕಾತಿ ಪತ್ರಗಳ ವಿತರಣೆಯೂ ಸಹ ಮುಗಿದಿತ್ತು. ಆದರೆ ಬಾಕಿಯಿರುವ ನೇಮಕಾತಿ ಪತ್ರಗಳನ್ನು ವಿತರಿಸದಂತೆ ಸುಪ್ರೀಂ ಕೋರ್ಟ್‌ ಸೂಚಿಸಿದೆ. ಕಳೆದ ಅ. 12 ರಂದು ಹೈಕೋರ್ಟ್‌ ವಿಭಾಗೀಯ ಪೀಠ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯನ್ನು ಮುಂದುವರೆಸಲು ಆದೇಶ ನೀಡಿತ್ತು. 

Share this Story:

Follow Webdunia kannada

ಮುಂದಿನ ಸುದ್ದಿ

ಕೋಟಿ ಕೋಟಿ ಬಿಬಿಎಂಪಿ ತೆರಿಗೆ ಬಾಕಿ ಉಳಿಸಿಕೊಂಡ ಮಾಲ್ ಮಾಲೀಕರುಗಳು