ದೆಹಲಿಯಲ್ಲಿ ಶಿಕ್ಷಕಿಯೊಬ್ಬಳು ತನ್ನ ಅಪ್ರಾಪ್ತ ವಿದ್ಯಾರ್ಥಿಯೊಂದಿಗೆ ಪ್ರೇಮದಲ್ಲಿ ಸಿಲುಕಿ ಓಡಿ ಹೋಗಲು ಯತ್ನಿಸಿದ ವಿಚಿತ್ರ ಘಟನೆ ವರದಿಯಾಗಿದೆ. ಶಿಕ್ಷಕಿ ಮತ್ತು ವಿದ್ಯಾರ್ಥಿ ಇಬ್ಬರು ಮುಂಬೈಗೆ ಹೋಗಲು ರೈಲಿನಲ್ಲಿ ಪ್ರಯಾಣಿಸುತ್ತಿರುವಾಗ ರೈಲ್ವೆ ಪೊಲೀಸರು ಇಬ್ಬರನ್ನು ಬಂಧಿಸಿ, ಪೋಷಕರಿಗೆ ಮಾಹಿತಿ ನೀಡಿದ್ದಾರೆ.
ರೈಲ್ವೆ ಪೊಲೀಸರ ಪ್ರಕಾರ, ಇಬ್ಬರು ದೆಹಲಿ ಮೂಲದವರಾಗಿದ್ದು 28 ವರ್ಷ ವಯಸ್ಸಿನ ಶಿಕ್ಷಕಿ ಟ್ಯೂಶನ್ ಹೇಳಿಕೊಡಲು ಬಾಲಕನ ಮನೆಗೆ ಬರುತ್ತಿದ್ದಳು. ಇಬ್ಬರು ಪ್ರೇಮಪಾಶದಲ್ಲಿ ಸಿಲುಕಿದ್ದಾರೆ. ನಂತರ ಮುಂಬೈಗೆ ಓಡಿಹೋಗಲು ನಿರ್ಧರಿಸಿದಾಗ ಪೊಲೀಸರ ಬಲೆಗೆ ಸಿಲುಕಿದ್ದಾರೆ.
ಬಾಲಕನ ಪೋಷಕರು ಪೊಲೀಸ್ ಠಾಣೆಗೆ ಆಗಮಿಸಿದ್ದು, ಶಿಕ್ಷಕಿಯ ಪೋಷಕರು ಕೂಡಾ ಪೊಲೀಸ್ ಠಾಣೆಗೆ ಆಗಮಿಸುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 14 ವರ್ಷದ ಹುಡುಗನ ಕುಟುಂಬವು ಹೈದರಾಬಾದ್ನಲ್ಲಿ ಅವರ ಕಣ್ಮರೆಗೆ ಸಂಬಂಧಿಸಿದಂತೆ ಕಳೆದುಹೋದ ವರದಿಯನ್ನು ದಾಖಲಿಸಿದೆ. ಅದರ ನಂತರ ಪೊಲೀಸರು ಆತನನ್ನು ಹುಡುಕುತ್ತಿದ್ದಾರೆ.
ಬಾಲಕನ ಪೋಷಕರು ಪುತ್ರಕಾಣೆಯಾಗಿರುವ ಬಗ್ಗೆ ಹೈದ್ರಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ನಂತರ ಬಾಲಕನ ಹುಡುಕಾಟಕ್ಕೆ ಪೊಲೀಸರು ಮುಂದಾಗಿದ್ದರು.
ಇಬ್ಬರೂ ಮುಂಬೈಗೆ ಎಕ್ಸ್‌ಪ್ರೆಸ್ ರೈಲಿನಲ್ಲಿ ಹೋಗಿದ್ದಾರೆ ಎಂದು ಪೊಲೀಸರಿಗೆ ಮಾಹಿತಿ ದೊರೆತಿತ್ತು ಎನ್ನಲಾಗಿದೆ.
ಈ ಬಗ್ಗೆ ದೆಹಲಿ ಪೊಲೀಸರು ಬಾಲಕನನ ಛಾಯಾಚಿತ್ರವನ್ನು ವಾಟ್ಸಪ್ ಮೂಲಕ ರೈಲ್ವೆ ಪೊಲೀಸ್‌ಗೆ ರವಾನಿಸಿ ಸಹಾಯ ಕೋರಿದ್ದರು.ಮತ್ತೊಂದೆಡೆ ಶಿಕ್ಷಕಿ ತಮ್ಮ ಪುತ್ರನನ್ನು ಒತ್ತಾಯಪೂರ್ವಕವಾಗಿ ಕರೆದುಕೊಂಡು ಹೋಗಿದ್ದಾಳೆ ಎಂದು ಬಾಲಕನ ತಂದೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.