Select Your Language

Notifications

webdunia
webdunia
webdunia
webdunia

ಅಪ್ರಾಪ್ತ ಬಾಲಕನೊಂದಿಗೆ ಲವ್ವಿಡವ್ವಿ, ಮಹಿಳೆ ಪರಾರಿ?ಪೋಸ್ಕೋ ಕಾಯ್ದೆ ದಾಖಲು

ಅಪ್ರಾಪ್ತ ಬಾಲಕನೊಂದಿಗೆ ಲವ್ವಿಡವ್ವಿ, ಮಹಿಳೆ ಪರಾರಿ?ಪೋಸ್ಕೋ ಕಾಯ್ದೆ ದಾಖಲು
delhi , ಸೋಮವಾರ, 18 ಡಿಸೆಂಬರ್ 2023 (01:10 IST)
ಇಬ್ಬರು ದೆಹಲಿ ನಗರದ ನಿವಾಸಿಗಳಾಗಿದ್ದಾರೆ. ಒಂದೇ ಬಡಾವಣೆಯಲ್ಲಿ ವಾಸಿಸುತ್ತಿದ್ದರಿಂದ ಚಿರಪರಿಚಿತರಾಗಿದ್ದರು. ಇಬ್ಬರ ಪರಿಚಯ ಅನೈತಿಕ ಸಂಬಂಧಕ್ಕೆ ತಿರುಗಿತ್ತು. ಅಪ್ರಾಪ್ತ ಬಾಲಕನನ್ನು ಅಪಹರಿಸಿದ ಗೃಹಿಣಿಯ ವಿರುದ್ಧ ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ. 
 
ಆರೋಪಿ ಮಹಿಳೆಯ ಪತಿ ಕುಡಿಯುವ ಟ್ಯಾಂಕರ್ ನೀರು ಸರಬರಾಜು ಮಾಡುವ ವೃತ್ತಿಯಲ್ಲಿದ್ದಾನೆ. ವಿವಾಹವಾಗಿ ಎರಡು ವರ್ಷಗಳಾಗಿದ್ದರೂ ಮಕ್ಕಳಾಗಿರಲಿಲ್ಲ. ಮಹಿಳೆಯ ಜೊತೆ ಪರಾರಿಯಾಗಿದ್ದ ಬಾಲಕ ಓದುವುದು ಬಿಟ್ಟಿದ್ದನು ಎಂದು ಮೂಲಗಳು ತಿಳಿಸಿವೆ.
 
ತನಿಖಾಧಿಕಾರಿಗಳ ಪ್ರಕಾರ, ಇಬ್ಬರು ಕಾಣೆಯಾಗಿದ್ದರು. ಮಹಿಳೆಯ ಪತಿ ರಾತ್ರಿಯೇ ರಾಬರ್ಟ್ಸನ್ ಪೊಲೀಸ್ ಠಾಣೆಗೆ ತೆರಳಿ ಪತ್ನಿ 1.50 ಲಕ್ಷ ರೂ.ತೆಗೆದುಕೊಂಡು ಕಾಣೆಯಾಗಿದ್ದಾಳೆ ಎಂದು ದೂರು ನೀಡಿದ್ದನು. ಮಾರನೇ ದಿನ ಬೆಳಿಗ್ಗೆ ಬಾಲಕನ ತಂದೆ ಕೂಡಾ ಮಗ ಕಾಣೆಯಾದ ಬಗ್ಗೆ ದೂರು ನೀಡಿದ್ದರು ಎಂದು ತಿಳಿಸಿದ್ದಾರೆ.
 
ಶೀಘ್ರದಲ್ಲೇ, ಗೃಹಿಣಿಯ ಮೊಬೈಲ್ ಫೋನ್ ಕರೆಗಳನ್ನು ಪತ್ತೆಹಚ್ಚಲು ಪೊಲೀಸರು ಪ್ರಾರಂಭಿಸಿದರು. ಇಬ್ಬರೂ ಪ್ರತಿದಿನ  ಸ್ಥಳಾಂತರಗೊಳ್ಳುತ್ತಿದ್ದರು, ವಿಶಾಖಪಟ್ಟಣಂ, ವಿಜಯವಾಡಾ, ನೆಲ್ಲೂರು ಮತ್ತು ತಮಿಳುನಾಡಿನ ಮಹಾಬಲೀಪುರಂ ಸೇರಿದಂತೆ ಕೆಲವು ಐತಿಹಾಸಿಕ ಸ್ಥಳಗಳಿಗೆ ಭೇಟಿ ಮಾಡಿದರು, ಅಲ್ಲಿ ಅವರು ವಸತಿ ನಿಲಯಗಳಲ್ಲಿ ನೆಲೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
 
 ಅಂತಿಮವಾಗಿ, ಪೊಲೀಸರು ತಮಿಳುನಾಡಿನ ವೇಲನ್‌ಕಣ್ಣಿ ಪಟ್ಟಣದಲ್ಲಿರುವ ಹೋಟೆಲ್‌ನಲ್ಲಿ ತಂಗಿದ್ದ ಮಹಿಳೆ ಮತ್ತು ಬಾಲಕನನ್ನು ಬಂಧಿಸಲಾಯಿತು.
  
ಬಾಲಕ ಅಪ್ರಾಪ್ತನಾಗಿದ್ದು ಆತನೊಂದಿಗೆ ಸೆಕ್ಸ್‌ನಲ್ಲಿ ಪಾಲ್ಗೊಂಡಿರುವುದು ಅಪರಾಧವಾಗಿದೆ ಎಂದು ಮಹಿಳೆಗೆ ಪೊಲೀಸರು ತಿಳಿಹೇಳಿದರೂ ಪ್ರಯೋಜನವಾಗಲಿಲ್ಲ. ನಾವಿಬ್ಬರು ಪರಸ್ಪರ ಪ್ರೀತಿಸುತ್ತಿದ್ದು ಶೀಘ್ರದಲ್ಲಿಯೇ ಮದುವೆಯಾಗಲಿದ್ದೇವೆ ಎಂದು ಮಹಿಳೆ ತಿಳಿಸಿದ್ದಾಳೆ.

Share this Story:

Follow Webdunia kannada

ಮುಂದಿನ ಸುದ್ದಿ

ಒಂಟಿ ಸಲಗ ದಾಳಿ: ಮೃತರ ಕುಟುಂಬಕ್ಕೆ ಪರಿಹಾರ, ಉದ್ಯೋಗ ನೀಡಲು ಸೂಚನೆ