Publish Date: Sun, 17 Dec 2023 (15:24 IST)
Updated Date: Sun, 17 Dec 2023 (15:27 IST)
ಜಗಳ ಅತಿರೇಕಕ್ಕೆ ಹೋಗಿ ತನ್ನ ಗೆಳತಿ ಕಾಲಿನ ಮೇಲೆ ವ್ಯಕ್ತಿಯೊಬ್ಬ ಕಾರು ಹತ್ತಿಸಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಆತ ಮಹಾರಾಷ್ಟ್ರ ಹಿರಿಯ ಅಧಿಕಾರಿಯೊಬ್ಬರ ಮಗನಾಗಿದ್ದು, ಥಾಣೆಯ ಹೋಟೆಲ್ ಬಳಿ ಗೆಳತಿ ಕಾಲಿನ ಮೇಲೆ ಕಾರು ಹತ್ತಿಸಿದ್ದಾನೆ. ಡಿಸೆಂಬರ್ 11 ರಂದು ಘಟನೆ ನಡೆದಿದೆ. ಆರೋಪಿ ಅಶ್ವಜಿತ್ ಗಾಯಕ್ವಾಡ್ ಮತ್ತು ಇತರ ಇಬ್ಬರ ವಿರುದ್ಧ ಪೊಲೀಸರು IPC ಸೆಕ್ಷನ್ 323ರ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.