Select Your Language

Notifications

webdunia
webdunia
webdunia
webdunia

ಶಿಕ್ಷಕರಲ್ಲೂ ಕೂಡ ಕ್ವಾಲಿಟಿ ಇರಬೇಕು- ಡಿಕೆಶಿವಕುಮಾರ್

ಶಿಕ್ಷಕರಲ್ಲೂ ಕೂಡ ಕ್ವಾಲಿಟಿ ಇರಬೇಕು- ಡಿಕೆಶಿವಕುಮಾರ್
bangalore , ಸೋಮವಾರ, 25 ಡಿಸೆಂಬರ್ 2023 (14:00 IST)
ಬಿಬಿಎಂಪಿ ಶಾಲೆಗಳ ಗುತ್ತಿಗೆ ಆಧಾರದ ಶಿಕ್ಷಕರು ಭೇಟಿಯಾದ ವಿಚಾರವಾಗಿ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.ಗುತ್ತಿಗೆ ಶಿಕ್ಷಕರು ಬಂದು ಭೇಟಿ ಮಾಡಿದ್ದಾರೆ .ಅವರು ನಮ್ಮನ್ನೇ ಮುಂದುವರಿಸಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.

ನಮ್ಮ ಶಿಕ್ಷಣ ಇಲಾಖೆಯವರು ಯಾಕೆ ಜವಾಬ್ದಾರಿ ತೆಗೆದುಕೊಂಡಿದ್ದೇವೆ ಎಂದರೆ ಬಿಬಿಎಂಪಿ ಶಾಲೆಗಳ ಶಿಕ್ಷಣದ ಗುಣಮಟ್ಟ ಕಡಿಮೆಯಾಗಿದೆ.ಕೆಲವು ಸೆಕ್ಯೂರಿಟಿ ಏಜೆನ್ಸಿಗಳು ಟೀಚರ್ಸ್‌ಗಳನ್ನು ಪೂರೈಕೆ ಮಾಡುತ್ತಿದ್ದಾರೆ ಎಂದು ಮಾಹಿತಿ ಇದೆ.ಯಾರ್ಯಾರು ಏನೇನು ಕೆಲಸ ಮಾಡಬೇಕು ಅದನ್ನೇ ಮಾಡಬೇಕು.ಸೆಕ್ಯೂರಿಟಿ ಏಜೆನ್ಸಿಯವರು ಶಿಕ್ಷಕರನ್ನು ಒದಗಿಸುವ ಕೆಲಸ ಆಗಬಾರದು ಹೀಗಾಗಿ ನಮ್ಮ ಶಿಕ್ಷಣ ಇಲಾಖೆಗೆ ಹೇಳಿದ್ದೇವೆ .
 
ನಾನು ಕೆಲ ಅಧಿಕಾರಿಗಳಿಗೂ ಹೇಳಿದ್ದೇನೆ.ಯಾರ್ಯಾರು ಚೆನ್ನಾಗಿ ಪಾಠ ಮಾಡುತ್ತಾರೆ.ಯಾರು ಗುಣಮಟ್ಟ ಉಳಿಸಿಕೊಂಡಿದ್ದಾರೆ ಅವರಿಗೆ ಪ್ರಾತಿನಿಧ್ಯ ಕೊಡಿ ಎಂದು ಹೇಳಿದ್ದೇನೆ.ಅವರಿಗೆ ಏನು ಸಹಾಯ ಮಾಡಬಹುದು ಅನ್ನೋದನ್ನ ಬಿಬಿಎಂಪಿ ವತಿಯಿಂದ ಮಾಡುತ್ತೇವೆ.ಶಾಲೆಗಳಲ್ಲಿ ಬಿಬಿಎಂಪಿ ಎಲ್ಲ ಮೂಲಭೂತ ಸೌಕರ್ಯ ಒದಗಿಸುತ್ತದೆ.ಗುಣಮಟ್ಟ ಕೊಡಬೇಕಾಗಿದ್ದು ನಮ್ಮ ಕರ್ತವ್ಯ.ಶಿಕ್ಷಕರಲ್ಲೂ ಕೂಡ ಕ್ವಾಲಿಟಿ ಇರಬೇಕು ಎನ್ನುವ ದೃಷ್ಟಿಯಿಂದ ಈ ತೀರ್ಮಾನ ಮಾಡಿದ್ದೇವೆ ಎಂದು ಡಿಕೆಶಿವಕುಮಾರ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬರಗಾಲ ಬರಲಿ ಎಂದು ರೈತರು ಕಾಯ್ತಿದ್ದಾರೆ: ಶಿವಾನಂದ ಪಾಟೀಲ್ ಹೇಳಿಕೆ ಕಾಂಗ್ರೆಸ್ ಗೆ ಮುಳ್ಳು