Select Your Language

Notifications

webdunia
webdunia
webdunia
webdunia

ಅಯೋಧ್ಯೆ ರಾಮಮಂದಿರ ಅರ್ಚಕರ ಪಟ್ಟಿಯಲ್ಲಿ ಹಿಂದುಳಿದ ವರ್ಗದವರಿಗೂ ಸ್ಥಾನ

ayodhya decorated with flowers
ಅಯೋಧ್ಯೆ , ಮಂಗಳವಾರ, 2 ಜನವರಿ 2024 (12:00 IST)
ಅಯೋಧ್ಯೆ: ಅಯೋಧ್ಯೆ ರಾಮಂದಿರದಲ್ಲಿ ಹಿಂದುಳಿದ ವರ್ಗದವರಿಗೆ ಅರ್ಚಕರಾಗಿ ಸೇವೆ ಸಲ್ಲಿಸಲು ಅವಕಾಶವಿದೆಯಾ ಎಂಬ ಪ್ರಶ್ನೆಗಳಿಗೆ ಈಗ ಉತ್ತರ ಸಿಕ್ಕಿದೆ.

ನೂತನವಾಗಿ ನಿರ್ಮಿಸಲಾಗಿರುವ ರಾಮಮಂದಿರಕ್ಕೆ 24 ಅರ್ಚಕರನ್ನು ನೇಮಿಸಲಾಗಿದೆ. ಈ ಪೈಕಿ ಇಬ್ಬರು ಎಸ್ಸಿ, ಓರ್ವ ಒಬಿಸಿ ಸಮುದಾಯಕ್ಕೆ ಸೇರಿದ ಅರ್ಚಕರೂ ಸೇರಿದ್ದಾರೆ.

ಅರ್ಚಕರಿಗೆ ಮೂರು ತಿಂಗಳು ಗುರುಕುಲ ಪದ್ಧತಿಯಲ್ಲಿ ತರಬೇತಿ ನೀಡಲಾಗುತ್ತದೆ. ಈ ವೇಳೆ ಅವರು ಆಧುನಿಕ ಸೌಲಭ್ಯಗಳಾದ ಮೊಬೈಲ್, ಇಂಟರ್ನೆಟ್ ಬಳಸುವಂತಿಲ್ಲ. ಈ ಸಂದರ್ಭದಲ್ಲಿ ಅವರಿಗೆ ದೇವಾರಾಧನೆಯ ನಿಯಮಾವಳಿಗಳನ್ನು ಕಲಿಸಲಾಗುತ್ತದೆ.

ಕಳೆದ ನವಂಬರ್ ನಲ್ಲಿ ಅರ್ಚಕ ವೃತ್ತಿಗೆ ಸಂದರ್ಶನ ಮಾಡಲಾಗಿತ್ತು. ಈ ವೇಳೆ ಅಂತಿಮ ಸುತ್ತಿನಲ್ಲಿ ಆಯ್ಕೆಯಾದ 24 ಅರ್ಚಕರನ್ನು ತರಬೇತಿ ನೀಡಲಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ