Select Your Language

Notifications

webdunia
webdunia
webdunia
webdunia

ಸ್ವಾತಿ ಮಿಶ್ರಾ ಹಾಡಿದ ರಾಮ ಹಾಡು ಮೆಚ್ಚಿದ ಪ್ರಧಾನಿ ಮೋದಿ

narendra modi
ನವದೆಹಲಿ , ಬುಧವಾರ, 3 ಜನವರಿ 2024 (11:50 IST)
ನವದೆಹಲಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಿ ರಾಮಲಲ್ಲಾನ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮಕ್ಕೆ ಕೆಲವೇ ದಿನಗಳು ಬಾಕಿಯಿವೆ.

ರಾಮಮಂದಿರ ಲೋಕಾರ್ಪಣೆ ದಿನ ಮನೆ ಮನೆಗಳಲ್ಲಿ ದೀಪ ಹಚ್ಚಿ ಪ್ರಭು ಶ್ರೀರಾಮಚಂದ್ರನಿಗೆ ನಮನ ಸಲ್ಲಿಸಲು ಪ್ರಧಾನಿ ಮೋದಿ ಕರೆಕೊಟ್ಟಿದ್ದಾರೆ.

ಈ ನಡುವೆ ಮೋದಿ ತಮ್ಮ ಸೋಷಿಯಲ್ ಮೀಡಿಯಾ ಪುಟದಲ್ಲಿ ಸ್ವಾತಿ ಮಿಶ್ರಾ ಅವರು ಹಾಡಿದ ರಾಮ್ ಆಯೇಂಗೆ ಎಂಬ ಹಾಡೊಂದನ್ನು ಶೇರ್ ಮಾಡಿದ್ದಾರೆ. ಈ ಹಾಡಿಗೆ ಮೋದಿ ಫಿದಾ ಆಗಿದ್ದಾರೆ.

ಅಯೋಧ್ಯೆಗೆ ರಾಮಲಲ್ಲಾನನ್ನು ಸ್ವಾಗತಿಸುವ ಹಾಡು ಇದಾಗಿದೆ. ಸ್ವಾತಿ ಮಿಶ್ರಾಜಿಯವರ ಈ ಹಾಡು ನಮ್ಮನ್ನು ತನ್ಮಯಗೊಳಿಸುತ್ತದೆ ಎಂದು ಮೋದಿ ಬರೆದುಕೊಂಡಿದ್ದಾರೆ. ಬಿಹಾರಿ ಮೂಲದ ಸ್ವಾತಿ ಮಿಶ್ರಾ ತಮ್ಮದೇ ಯೂ ಟ್ಯೂಬ್ ವಾಹಿನಿಯಲ್ಲಿ ಹಾಡನ್ನು ಪ್ರಕಟಿಸಿದ್ದರು. ಆದರೆ ಈಗ ಪ್ರಧಾನಿ ಮೋದಿಯೇ ಹಾಡನ್ನು ಶೇರ್ ಮಾಡಿದ ಬಳಿಕ ಇದು ಭಾರೀ ವೈರಲ್ ಆಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೊಸ ವರ್ಷಕ್ಕೆ ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ಸುತ್ತಾಟ