Publish Date: Wed, 03 Jan 2024 (11:30 IST)
Updated Date: Wed, 03 Jan 2024 (11:41 IST)
ಹೈದರಾಬಾದ್: ನಟಿ ರಶ್ಮಿಕಾ ಮಂದಣ್ಣ ಗೆಳೆಯ ವಿಜಯ್ ದೇವರಕೊಂಡ ಜೊತೆ ನ್ಯೂ ಇಯರ್ ನಿಮಿತ್ತ ಟೂರ್ ಮಾಡುತ್ತಿದ್ದಾರಾ? ರಶ್ಮಿಕಾ ಲೇಟೆಸ್ಟ್ ವಿಡಿಯೋವೊಂದನ್ನು ನೋಡಿದ ಅಭಿಮಾನಿಗಳು ಇಂತಹದ್ದೊಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ರಶ್ಮಿಕಾ ಇತ್ತೀಚೆಗೆ ಹೊಸ ವರ್ಷದಂದು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ವಿಡಿಯೋ ಪ್ರಕಟಿಸಿದ್ದರು. ಹಚ್ಚ ಹಸಿರಿನ ನಡುವೆ ರೆಸಾರ್ಟ್ ನಂತಹ ಜಾಗದಲ್ಲಿ ರಶ್ಮಿಕಾ ಖುಷಿಯಿಂದ ನಡೆದಾಡುತ್ತಿರುವ ವಿಡಿಯೋ ಪ್ರಕಟಿಸಿದ್ದರು.
ಈ ವಿಡಿಯೋ ನೋಡಿದ ನೆಟ್ಟಿಗರು ಈ ವಿಡಿಯೋವನ್ನು ವಿಜಯ್ ದೇವರಕೊಂಡ ಚಿತ್ರೀಕರಿಸಿದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ರಶ್ಮಿಕಾ ತಮ್ಮನ್ನು ವಿಡಿಯೋ ಮಾಡಿದ್ದು ಯಾರು ಎಂದು ಎಲ್ಲೂ ಹೇಳಿಕೊಂಡಿಲ್ಲ.
ಆದರೆ ಇದಕ್ಕೆ ಮೊದಲು ಹಲವು ಬಾರಿ ರಶ್ಮಿಕಾ ಫೋಟೋ, ವಿಡಿಯೋಗಳಲ್ಲಿ ವಿಜಯ್ ದೇವರಕೊಂಡ ಇರುವ ಬಗ್ಗೆ ಫ್ಯಾನ್ಸ್ ಗುಮಾನಿ ವ್ಯಕ್ತಪಡಿಸಿದ್ದರು. ಅಲ್ಲದೆ, ಕೆಲವೊಂದು ಫೋಟೋಗಳಲ್ಲಿ ರಶ್ಮಿಕಾ ಮತ್ತು ವಿಜಯ್ ಒಂದೇ ಸ್ಥಳದಲ್ಲಿರುವುದನ್ನೂ ಫ್ಯಾನ್ಸ್ ಗಮನಿಸಿದ್ದರು. ಆದರೆ ಇದುವರೆಗೂ ಇಬ್ಬರೂ ಅಧಿಕೃತವಾಗಿ ತಮ್ಮಿಬ್ಬರ ಸಂಬಂಧವನ್ನು ಬಹಿರಂಗಪಡಿಸಿಲ್ಲ.