Publish Date: Fri, 12 Jan 2024 (09:50 IST)
Updated Date: Fri, 12 Jan 2024 (09:52 IST)
ಮುಂಬೈ: ಟೀಂ ಇಂಡಿಯಾದಲ್ಲಿ ಎಲ್ಲಾ ಕ್ರಿಕೆಟಿಗರಿಗೂ ಪರಸ್ಪರ ಅಡ್ಡ ಹೆಸರು ಇಟ್ಟು ಕರೆಯುತ್ತಾರೆ. ಅದಕ್ಕೆ ವಿರಾಟ್ ಕೊಹ್ಲಿ ಬೆಸ್ಟ್ ಉದಾಹರಣೆ.
ಧೋನಿ ಸೇರಿದಂತೆ ಹಿರಿಯ ಆಟಗಾರರು ಕೊಹ್ಲಿಗೆ ಚೀಕು ಎಂಬ ಅಡ್ಡಹೆಸರಿಟ್ಟು ಕರೆಯುತ್ತಿದ್ದರು ಎಂದು ಎಲ್ಲರಿಗೂ ಗೊತ್ತು. ಈಗ ಬಹುಶಃ ಆ ಹೆಸರೆತ್ತಿ ಕೊಹ್ಲಿಯನ್ನು ಕರೆಯುವ ಧೈರ್ಯ ಯಾವ ಯುವ ಕ್ರಿಕೆಟಿಗರಿಗೂ ಇಲ್ಲ.
ಆದರೆ ತಂಡದ ವೇಗಿ ಮೊಹಮ್ಮದ್ ಶಮಿಗೆ ಇರುವ ಅಡ್ಡ ಹೆಸರೇನೆಂದು ಈಗ ಸ್ವತಃ ಕೊಹ್ಲಿಯೇ ಬಹಿರಂಗಪಡಿಸಿದ್ದಾರೆ. ಮೊಹಮ್ಮದ್ ಶಮಿ ಸೋಷಿಯಲ್ ಮೀಡಿಯಾ ಪುಟದಲ್ಲಿ ಕೊಹ್ಲಿ ಹೇಳಿದ್ದಾರೆ.
ಇತ್ತೀಚೆಗೆ ಮೊಹಮ್ಮದ್ ಶಮಿ ರಾಷ್ಟ್ರಪತಿಗಳಿಂದ ಅರ್ಜುನ ಅವಾರ್ಡ್ ಸ್ವೀಕರಿಸಿದ್ದರು. ಈ ಪ್ರಶಸ್ತಿ ಪಡೆದ ಖುಷಿಯನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಕೊಹ್ಲಿ ಮುಬಾರಕ್ ಹೋ ಲಾಲ ಎಂದಿದ್ದರು. ಆ ಮೂಲಕ ಶಮಿಯ ಅಡ್ಡ ಹೆಸರು ಲಾಲ ಎಂದು ಬಹಿರಂಗಪಡಿಸಿದ್ದಾರೆ. ಇದಕ್ಕೆ ಮೊದಲು ಟೀಂ ಇಂಡಿಯಾದಲ್ಲಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಗೂ ಇದೇ ಅಡ್ಡ ಹೆಸರಿತ್ತು. ಈಗ ಶಮಿಗೆ ಆ ಹೆಸರು ವರ್ಗಾವಣೆಯಾಗಿದೆ.