Select Your Language

Notifications

webdunia
webdunia
webdunia
webdunia

ಮತ್ತೆ ವಿರಾಟ್ ಕೊಹ್ಲಿ ಮಿಸ್ಸಿಂಗ್: ಇಂದಿನ ಪಂದ್ಯಕ್ಕೆ ಹೊರಗುಳಿಯಲು ಮಗಳು ಕಾರಣ!

Virat Kohli Vamika

Krishnaveni K

ಮೊಹಾಲಿ , ಗುರುವಾರ, 11 ಜನವರಿ 2024 (08:40 IST)
Photo Courtesy: Twitter
ಮೊಹಾಲಿ: ಅಫ್ಘಾನಿಸ್ತಾನ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ವಿರಾಟ್ ಕೊಹ್ಲಿ ಆಡುತ್ತಾರೆಂದು ಕಾದು ಕೂತಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದೆ.

ಕೊಹ್ಲಿ ಈ ಪಂದ್ಯದಲ್ಲಿ ಆಡುತ್ತಿಲ್ಲ. ವೈಯಕ್ತಿಕ ಕಾರಣದಿಂದ ಅವರಿಗೆ ಆಡಲು ಸಾಧ‍್ಯವಾಗುತ್ತಿಲ್ಲ ಎಂದು ಕೋಚ್ ರಾಹುಲ್ ದ್ರಾವಿಡ್ ಹೇಳಿದ್ದಾರೆ. ಹೀಗಾಗಿ ಕೊಹ್ಲಿಗೆ ಕಾಡುತ್ತಿರುವ ಸಮಸ್ಯೆ ಏನು ಎಂದು ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ.

ಕಳೆದ ವಿಶ್ವಕಪ್ ಆರಂಭಕ್ಕೂ ಮುನ್ನವೇ ಕೊಹ್ಲಿ ಕೌಟುಂಬಿಕ ಕಾರಣ ನೀಡಿ ದಿಡೀರ್ ಮನೆಗೆ ಮರಳಿದ್ದರು. ದ.ಆಫ್ರಿಕಾ ಸರಣಿಯ ಮೊದಲೂ ಇದೇ ರೀತಿ ಆಗಿತ್ತು. ಕೌಟುಂಬಿಕ ಕಾರಣ ನೀಡಿ ತಂಡದಿಂದ ಹೊರ ನಡೆದಿದ್ದರು. ಇದೀಗ ಮತ್ತೆ ಅಫ್ಘಾನಿಸ್ತಾನ ಸರಣಿಗೆ ಮುನ್ನ ತಂಡ ತೊರೆದಿದ್ದಾರೆ.

ಇಂದು ಕೊಹ್ಲಿ ಪುತ್ರಿ ವಮಿಕಾ ಹುಟ್ಟುಹಬ್ಬವಿದ್ದು, ಆ ಕಾರಣಕ್ಕೆ ಅವರು ಮಗಳ ಜೊತೆಗಿರಲು ಪಂದ್ಯವನ್ನೇ ಬಿಟ್ಟು ಹೊರನಡೆದಿರಬಹುದು ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

IND vs AFG T20: ಮೊದಲ ಟಿ20 ಪಂದ್ಯ ಆರಂಭ ಸಮಯ, ಉಚಿತವಾಗಿ ಲೈವ್ ಎಲ್ಲಿ ವೀಕ್ಷಿಸಬೇಕು?