Publish Date: Fri, 12 Jan 2024 (09:17 IST)
Updated Date: Fri, 12 Jan 2024 (09:18 IST)
ಮೊಹಾಲಿ: ಅಫ್ಘಾನಿಸ್ತಾನ ವಿರುದ್ಧದ ಮೊದಲ ಟಿ20 ಪಂದ್ಯಕ್ಕೆ ಮುನ್ನ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ತಂಡದ ಜೊತೆಗೆ ಅಭ್ಯಾಸದ ವೇಳೆ ಕಾಣಿಸಿಕೊಂಡಿರಲಿಲ್ಲ. ಇದಕ್ಕೆ ಕಾರಣವೂ ಇದೆ.
14 ತಿಂಗಳ ಬಳಿಕ ಟಿ20 ಕ್ರಿಕೆಟ್ ಗೆ ಮರಳಿದ್ದ ರೋಹಿತ್ ಶರ್ಮಾ ತಂಡದ ಅಭ್ಯಾಸ ಸೆಷನ್ ನಲ್ಲಿ ಕಾಣಿಸಿಕೊಳ್ಳದೇ ಇದ್ದಿದ್ದು ಅನೇಕರಿಗೆ ಅಚ್ಚರಿಯುಂಟು ಮಾಡಿತ್ತು. ಆದರೆ ರೋಹಿತ್ ಪ್ರಯಾಣಿಸಬೇಕಿದ್ದ ವಿಮಾನವೇ ಇದಕ್ಕೆ ಕಾರಣವಾಗಿತ್ತು.
ಚಾರ್ಟರ್ಡ್ ವಿಮಾನದ ಮೂಲಕ ರೋಹಿತ್ ಮೊಹಾಲಿಗೆ ಬಂದಿಳಿಯಲಿದ್ದರು. ಆದರೆ ರೋಹಿತ್ ಪ್ರಯಾಣಿಸಬೇಕಾಗಿದ್ದ ವಿಮಾನ ನಿಗದಿತ ಸಮಯಕ್ಕೆ ಹೊರಟಿರಲಿಲ್ಲ. ವಿಮಾನ ತಡವಾಗಿದ್ದರಿಂದ ರೋಹಿತ್ ಗೆ ತಂಡದ ಜೊತೆಗೆ ಅಭ್ಯಾಸ ನಡೆಸಲು ಸಮಯ ಸಿಕ್ಕಿರಲಿಲ್ಲ.
ಹೀಗಾಗಿ ಮೊದಲ ಟಿ20 ಪಂದ್ಯಕ್ಕೆ ಮುನ್ನ ನೇರವಾಗಿ ಮೊಹಾಲಿ ಮೈದಾನಕ್ಕೇ ರೋಹಿತ್ ಬಂದಿಳಿದಿದ್ದರು. ಕೊಂಚವೂ ಅಭ್ಯಾಸ ನಡೆಸದೇ ಈ ಪಂದ್ಯವನ್ನು ಆಡಬೇಕಾಗಿ ಬಂತು.