Select Your Language

Notifications

webdunia
webdunia
webdunia
webdunia

ಬೆಂಗಳೂರಲ್ಲೂ ಇಂಥಾ ಚಳಿ ನೋಡಿಲ್ಲ ಎಂದ ದ್ರಾವಿಡ್!

Rahul Dravid
Photo Courtesy: Twitter
ಮೊಹಾಲಿ: ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಮೊದಲ ಟಿ20 ಪಂದ್ಯವಾಡಲು ಮೊಹಾಲಿಯಲ್ಲಿರುವ ಟೀಂ ಇಂಡಿಯಾ ಕ್ರಿಕೆಟಿಗರು ಕೊರೆವ ಚಳಿಯಲ್ಲಿ ಅಭ್ಯಾಸ ನಡೆಸಬೇಕಾಗಿದೆ.

ಮೊಹಾಲಿಯಲ್ಲಿ ಚಳಿ ವಿಪರೀತವಾಗಿದ್ದು, ಈ ಚಳಿಗೆ ಅಭ್ಯಾಸ ನಡೆಸುತ್ತಿರುವ ಆಟಗಾರರ ತಮಾಷೆಯ ವಿಡಿಯೋವೊಂದನ್ನು ಬಿಸಿಸಿಐ ಹಂಚಿಕೊಂಡಿದೆ.

ಎಲ್ಲಾ ಆಟಗಾರರೂ ಟೋಪಿ, ಮೈ ತುಂಬಾ ಬಟ್ಟೆ ಧರಿಸಿ ಬೆಚ್ಚಗೆ ಮಾಡಿಕೊಂಡು ಅಭ್ಯಾಸಕ್ಕಿಳಿದಿದ್ದಾರೆ. ಹಾಗಿದ್ದರೂ ಮಾತನಾಡಲೂ ಆಗದಷ್ಟು ಚಳಿಗೆ ಮುದ್ದೆಯಾಗಿದ್ದಾರೆ.

ಕೋಚ್ ರಾಹುಲ್ ದ್ರಾವಿಡ್ ಬೆಂಗಳೂರಿನಲ್ಲೂ ಇಂತಹ ಚಳಿ ನಾನು ನೋಡಿಲ್ಲ ಎಂದಿದ್ದಾರೆ. ಇನ್ನು, ಅಕ್ಸರ್ ಪಟೇಲ್, ಆವೇಶ್ ಖಾನ್ ಮುಂತಾದವರು ಇದು ಮೈನಸ್ ಡಿಗ್ರಿಯಲ್ಲ ಅದಕ್ಕಿಂತಲೂ ಕಡಿಮೆಯಿರಬೇಕು ಎಂದು ತಮಾಷೆ ಮಾಡಿದ್ದಾರೆ. ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ನಿನ್ನೆ ಪತ್ರಿಕಾಗೋಷ್ಠಿಯಲ್ಲೂ ಟೋಪಿ ಹಾಕಿಕೊಂಡೇ ಮಾತನಾಡಲು ಕುಳಿತಿದ್ದರು. ಇಂತಹ ಚಳಿಯಲ್ಲಿ ಆಡುವುದೇ ಒಂದು ಸವಾಲು.

Share this Story:

Follow Webdunia kannada

ಮುಂದಿನ ಸುದ್ದಿ

ಟೆಸ್ಟ್ ಗೆ ಕೆಎಲ್ ರಾಹುಲ್ ಬೇಡ! ಇಶಾನ್ ಕಿಶನ್ ಗೆ ರಣಜಿ ಆಡಲು ಸೂಚನೆ