Select Your Language

Notifications

webdunia
webdunia
webdunia
webdunia

ಕೋಚ್ ರಾಹುಲ್ ದ್ರಾವಿಡ್ ಬರ್ತ್ ಡೇಗೆ ಗೆಲುವಿನ ಉಡುಗೊರೆ ಕೊಡುತ್ತಾ ಟೀಂ ಇಂಡಿಯಾ?

Rahul Dravid

Krishnaveni K

ಮೊಹಾಲಿ , ಗುರುವಾರ, 11 ಜನವರಿ 2024 (09:50 IST)
ಮೊಹಾಲಿ: ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಇಂದಿನ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಗೆದ್ದರೆ ಅದು ಕೋಚ್ ರಾಹುಲ್ ದ್ರಾವಿಡ್ ಗೆ ವಿಶೇಷ ಉಡುಗೊರೆಯಾಗಲಿದೆ.

ಯಾಕೆಂದರೆ ಗುರು ದ್ರಾವಿಡ್ ಗೆ ಇಂದು ಜನ್ಮದಿನದ ಸಂಭ್ರಮ. ದ್ರಾವಿಡ್ ಇಂದು 51 ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಅವರ ಹುಟ್ಟುಹಬ್ಬ ದಿನವೇ ಟೀಂ ಇಂಡಿಯಾ ಪಂದ್ಯವಾಡುತ್ತಿರುವುದು ವಿಶೇಷ.

ಟೀಂ ಇಂಡಿಯಾದ ವಾಲ್ ಎಂದೇ ಖ್ಯಾತರಾಗಿದ್ದ ದ್ರಾವಿಡ್ ಭಾರತ ಕಂಡ ದಿಗ್ಗಜ ಆಟಗಾರರಲ್ಲೊಬ್ಬರು. ಟೀಂ ಇಂಡಿಯಾ ಕ್ಯಾಪ್ಟನ್ ಆಗಿ ಅವರ ಸಾಧನೆ ಅಷ್ಟೇನೂ ಇರಲಿಲ್ಲ. ಆದರೆ ಕೋಚ್ ಆಗಿ ಹಲವು ಉದಯೋನ್ಮುಖ ಆಟಗಾರರು ಬೆಳಕಿಗೆ ಬರಲು ಕಾರಣರಾದವರು.

ಒಟ್ಟು 509 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುವ ದ್ರಾವಿಡ್ 24,208 ರನ್ ಗಳಿಸಿದ್ದಾರೆ. 48 ಅಂತಾರಾಷ್ಟ್ರೀಯ ಶತಕಗಳೂ ಇದರಲ್ಲಿ ಸೇರಿವೆ. ಈ ಅಪರೂಪದ ಸಾಧಕನಿಗೆ ಇಂದು ಟೀಂ ಇಂಡಿಯಾ ಗೆಲುವಿನ ಉಡುಗೊರೆ ನೀಡುವ ನಿರೀಕ್ಷೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಲು ಹಿಡಿಯಲು ಬಂದ ಫ್ಯಾನ್ಸ್: ಕೆಎಲ್ ರಾಹುಲ್ ಮಾಡಿದ್ದೇನು?