Select Your Language

Notifications

webdunia
webdunia
webdunia
webdunia

ಕಾಲು ಹಿಡಿಯಲು ಬಂದ ಫ್ಯಾನ್ಸ್: ಕೆಎಲ್ ರಾಹುಲ್ ಮಾಡಿದ್ದೇನು?

KL Rahul
Photo Courtesy: Twitter
ಮುಂಬೈ: ಭಾರತದಲ್ಲಿ ಕ್ರಿಕೆಟಿಗರನ್ನು ದೇವರಂತೆ ಕಾಣುವ ಅಪ್ಪಟ ಅಭಿಮಾನಿಗಳಿದ್ದಾರೆ. ಅದರಲ್ಲೂ ತಮ್ಮ ನೆಚ್ಚಿನ ಕ್ರಿಕೆಟಿಗ ಎದುರಾದರಂತೂ ಮುಗಿಯಿತು.

ಇದೀಗ ಟೀಂ ಇಂಡಿಯಾದಿಂದ ಹೊರಗಿರುವ ಕ್ರಿಕೆಟಿಗ ಕೆಎಲ್ ರಾಹುಲ್ ಗೆ ಅಭಿಮಾನಿಯೊಬ್ಬರು ಕಾಲು ಮುಟ್ಟಿ ನಮಸ್ಕರಿಸಲು ಬಂದಿದ್ದು, ಗಲಿಬಿಲಿಗೊಂಡ ರಾಹುಲ್ ಅವರನ್ನು ನಡೆಸಿಕೊಂಡ ರೀತಿ ಎಲ್ಲರ ಗಮನ ಸೆಳೆದಿದೆ.

ರೆಸ್ಟೋರೆಂಟ್ ಒಂದರಿಂದ ರಾಹುಲ್ ಹೊರಬರುತ್ತಿದ್ದಂತೇ ಅವರನ್ನು ನೋಡಲು ಗುಂಪು ಕಟ್ಟಿ ನಿಂತಿದ್ದ ಅಭಿಮಾನಿಗಳ ಪೈಕಿ ಓರ್ವ ನೇರವಾಗಿ ರಾಹುಲ್ ಕಾಲು ಮುಟ್ಟಿ ನಮಸ್ಕರಿಸಿದ್ದಾನೆ. ಸಾಮಾನ್ಯವಾಗಿ ಅಭಿಮಾನಿಗಳು ಸೆಲ್ಫೀಗಾಗಿ ಬೇಡಿಕೆಯಿಡುತ್ತಾರೆ. ಆದರೆ ಈ ಅಭಿಮಾನಿ ಕಾಲಿಗೇ ಬಿದ್ದಾಗ ರಾಹುಲ್ ಕೊಂಚ ಗಲಿಬಿಲಿಯಾದರು. ಆದರೆ ತಕ್ಷಣವೇ ಸಾವರಿಸಿಕೊಂಡು ಆತನನ್ನು ಎಬ್ಬಿಸಿ ಸೆಲ್ಫೀಗೆ ಪೋಸ್ ಕೊಟ್ಟರು.

ಇದೀಗ ನಡೆಯುತ್ತಿರುವ ಭಾರತ-ಅಫ್ಘಾನಿಸ್ತಾನ ಟಿ20 ಸರಣಿಯಿಂದ ಕೆಎಲ್ ರಾಹುಲ್ ರನ್ನು ಹೊರಗಿಡಲಾಗಿದೆ. ಹೀಗಾಗಿ ಈ ವೇಳೆಯನ್ನು ಅವರು ತಮ್ಮ ಕುಟುಂಬದ ಜೊತೆ ಕಾಲ ಕಳೆಯುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೆ ವಿರಾಟ್ ಕೊಹ್ಲಿ ಮಿಸ್ಸಿಂಗ್: ಇಂದಿನ ಪಂದ್ಯಕ್ಕೆ ಹೊರಗುಳಿಯಲು ಮಗಳು ಕಾರಣ!