Select Your Language

Notifications

webdunia
webdunia
webdunia
webdunia

ಟೀಂ ಇಂಡಿಯಾದಲ್ಲಿ ಎಲ್ಲರೂ ಕುಡುಕರು: ಮಾಜಿ ವೇಗಿ ಪ್ರವೀಣ್ ಕುಮಾರ್ ಶಾಕಿಂಗ್ ಹೇಳಿಕೆ

Praveen Kumar

Krishnaveni K

ಮುಂಬೈ , ಮಂಗಳವಾರ, 9 ಜನವರಿ 2024 (13:12 IST)
Photo Courtesy: Twitter
ಮುಂಬೈ: ಒಂದು ಕಾಲದಲ್ಲಿ ಟೀಂ ಇಂಡಿಯಾದ ಆಕ್ರಮಣಕಾರೀ ವೇಗದ ಬೌಲರ್ ಗಳಲ್ಲಿ ಒಬ್ಬರಾಗಿದ್ದ ಪ್ರವೀಣ್ ಕುಮಾರ್ ಸಂದರ್ಶನವೊಂದರಲ್ಲಿ ಟೀಂ ಇಂಡಿಯಾ ಹಿರಿಯ ಆಟಗಾರರ ಬಗ್ಗೆ ಶಾಕಿಂಗ್ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ.

ಪ್ರವೀಣ್ ತಮ್ಮ ಕುಡಿತದ ಚಟ, ಮೈದಾನದ ಹೊರಗಿನ ಅತಿರೇಕದ ವರ್ತನೆಯಿಂದಲೇ ತಂಡದಲ್ಲಿ ಸ್ಥಾನ ಕಳೆದುಕೊಳ್ಳಬೇಕಾಯಿತು ಎಂದರೂ ತಪ್ಪಿಲ್ಲ. ಆದರೆ ಟೀಂ ಇಂಡಿಯಾದಲ್ಲಿ ನಾನು ಮಾತ್ರ ಮದ್ಯ ಸೇವಿಸುತ್ತಿದ್ದ ವ್ಯಕ್ತಿ ಅಲ್ಲ. ಎಲ್ಲರೂ ಕುಡುಕರೇ ಎಂದು ಸಂದರ್ಶನವೊಂದರಲ್ಲಿ ಅವರು ಹೇಳಿದ್ದಾರೆ.

ಟೀಂ ಇಂಡಿಯಾದಲ್ಲಿ ಹಿರಿಯ ಆಟಗಾರರೂ ಸೇರಿದಂತೆ ಎಲ್ಲರೂ ಕುಡುಕರೇ. ಆದರೆ ಕೇವಲ ಪ್ರವೀಣ್ ಮದ್ಯಪಾನ ಮಾಡುತ್ತಾನೆ ಎನ್ನುವುದಷ್ಟೇ ಸುದ್ದಿಯಾಯಿತು. ನಾನು ಮದ್ಯಪಾನ ಮಾಡುವಾಗ ಹಾಗೆ ಮಾಡಬೇಡ ಎಂದು ಸೀನಿಯರ್ ಆಟಗಾರರು ಹೇಳುತ್ತಿದ್ದರು. ಆದರೆ ಯಾರೂ ಇದಕ್ಕೆ ಹೊರತಾಗಿರಲಿಲ್ಲ ಎಂದಿದ್ದಾರೆ.

ಹಾಗಿದ್ದರೆ ನಿಮಗೆ ಕುಡಿಯದಂತೆ ಸಲಹೆ ನೀಡುತ್ತಿದ್ದವರಲ್ಲಿ ಸಚಿನ್, ದ್ರಾವಿಡ್, ಗಂಗೂಲಿ, ಧೋನಿಯಂತಹ ಆಟಗಾರರಿದ್ದಾರಾ ಎಂಬ ಪ್ರಶ್ನೆಗೆ ಪ್ರವೀಣ್ ನಾನು ಯಾರ ಹೆಸರನ್ನೂ ಕ್ಯಾಮರಾ ಮುಂದೆ ಹೇಳಲು ಬಯಸಲ್ಲ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

Ranji Trophy: ಸಂಜು ಸ್ಯಾಮ್ಸನ್ ಗೆ ಫ್ಯಾನ್ಸ್ ಮುತ್ತಿಗೆ