Select Your Language

Notifications

webdunia
webdunia
webdunia
webdunia

ಫ್ರೆಂಚ್ ಓಪನ್: ಬೋಪಣ್ಣ-ಮಿಡಲ್ ಕೂಪ್ ಜೋಡಿಗೆ ಸೆಮಿಫೈನಲ್ ನಲ್ಲಿ ಆಘಾತ

ಫ್ರೆಂಚ್ ಓಪನ್: ಬೋಪಣ್ಣ-ಮಿಡಲ್ ಕೂಪ್ ಜೋಡಿಗೆ ಸೆಮಿಫೈನಲ್ ನಲ್ಲಿ ಆಘಾತ
bangalore , ಗುರುವಾರ, 2 ಜೂನ್ 2022 (20:01 IST)
ಭಾರತದ ರೋಹನ್ ಬೋಪಣ್ಣ ಮತ್ತು ಮೆಟ್ವೆ ಮಿಡಲ್ ಕೂಪ್ ಜೋಡಿ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಸೆಮಿಫೈನಲ್ ನಿಂದ ಹೊರಬಿದ್ದಿದೆ.
ರೋಲ್ಯಾಂಡ್ ಗ್ಯಾರೋಸ್ ಮೈದಾನದಲ್ಲಿ ಗುರುವಾರ ನಡೆದ ಪುರುಷರ ಡಬಲ್ಸ್ ವಿಭಾಗದ ಸೆಮಿಫೈನಲ್ ನಲ್ಲಿ ಬೋಪಣ್ಣ-ಮಿಡಲ್ ಕೂಪ್ ಜೋಡಿ 6-4, 3-6, (6-7) ಸೆಟ್ ಗಳಿಂದ ಸೋಲುಂಡಿತು.
ತೀವ್ರ ಜಿದ್ದಾಜಿದ್ದಿನಿಂದ ಕೂಡಿದ ಪಂದ್ಯದಲ್ಲಿ ಬೋಪಣ್ಣ ಜೋಡಿ ಸೂಪರ್ ಟೈಬ್ರೇಕರ್ ನಲ್ಲಿ 8-10ರಿಂದ 12ನೇ ಶ್ರೇಯಾಂಕಿತ ಜೋಡಿಯಾದ ಜೀನ್ ಜೂಲಿಯನ್ ರೋಜರ್- ಮಾರ್ಸೆಲೊ ಅರೆವಲೋ ಜೋಡಿ ವಿರುದ್ಧ ಆಘಾತ ಅನುಭವಿಸಿತು.
2015ರ ನಂತರ ಇದೇ ಮೊದಲ ಸೆಮಿಫೈನಲ್ ಪ್ರವೇಶಿಸಿದ್ದ ಬೋಪಣ್ಣ ಫೈನಲ್ ಪ್ರವೇಶಿಸುವ ಕನಸು ಭಗ್ನಗೊಂಡಿತು.

Share this Story:

Follow Webdunia kannada

ಮುಂದಿನ ಸುದ್ದಿ

ಎಲ್ಲಾ ವದಂತಿಗಳಿಗೆ ತೆರೆ ಎಳೆದ ಗಂಗೂಲಿ: ಸಸ್ಪೆನ್ಸ್ ಕೊನೆಗೂ ರಿವೀಲ್ ಆಯ್ತು