Publish Date: Thu, 02 Jun 2022 (16:16 IST)
Updated Date: Thu, 02 Jun 2022 (16:18 IST)
ಕೋಲ್ಕೊತ್ತಾ: ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ನಿನ್ನೆ ಮಾಡಿದ್ದ ಟ್ವೀಟ್ ಒಂದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿತ್ತು. ಗಂಗೂಲಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬಹುದು, ರಾಜಕೀಯಕ್ಕೆ ಸೇರ್ಪಡೆಯಾಗಬಹುದು ಎಂಬಿತ್ಯಾದಿ ಊಹಾಪೋಹಗಳು ಹರಡಿದ್ದವು.
ಇದಕ್ಕೆ ಕಾರಣ, ನಾನೀಗ ಸಮಾಜಕ್ಕೆ ಉಪಯೋಗವಾಗುವಂತಹ ಮತ್ತೊಂದು ಫೀಲ್ಡ್ ಗೆ ಬರಲು ಸಿದ್ಧವಾಗಿದ್ದೇನೆ ಎಂದು ಸಂದೇಶ ಬರೆದಿದ್ದು. ಇಂದು ಕೊನೆಗೂ ಆ ಎಲ್ಲಾ ಕುತೂಹಲಕ್ಕೆ ಗಂಗೂಲಿ ವಿರಾಮ ನೀಡಿದ್ದಾರೆ.
ಗಂಗೂಲಿ ಹೊಸ ಎಜುಕೇಷನಲ್ ಆಪ್ ಲಾಂಚ್ ಮಾಡುತ್ತಿದ್ದಾರೆ. ಇದರ ಬಗ್ಗೆ ಅವರು ನಿನ್ನೆಯಿಂದ ಟ್ವೀಟ್ ಮಾಡಿದ್ದರು. ಈ ಆಪ್ ವಿದ್ಯಾರ್ಥಿಗಳು ಮತ್ತು ಕೋಚ್ ಗಳಿಗೆ ನೆರವಾಗಲಿದೆ. ಆದರೆ ಅವರು ಹೊಸ ಅಧ್ಯಾಯ ಆರಂಭಿಸುವುದಾಗಿ ಹೇಳಿದ್ದನ್ನು ನೋಡಿ ಅಭಿಮಾನಿಗಳು ಏನೇನೋ ಅಂದುಕೊಂಡಿದ್ದರು. ಈಗ ಎಲ್ಲಾ ರೂಮರ್ ಗಳಿಗೆ ತೆರೆಬಿದ್ದಿದೆ.