Select Your Language

Notifications

webdunia
webdunia
webdunia
webdunia

ಸೌರವ್‌ ಗಂಗೂಲಿ ರಾಜಕೀಯ ಪ್ರವೇಶ?

ಸೌರವ್‌ ಗಂಗೂಲಿ ರಾಜಕೀಯ ಪ್ರವೇಶ?
bengaluru , ಬುಧವಾರ, 1 ಜೂನ್ 2022 (18:37 IST)
ಹೊಸ ಹೆಜ್ಜೆ ಇಡಲು ಚಿಂತನೆ ಆರಂಭಿಸಿದ್ದೇನೆ. ಇದರಿಂದ ಸಾಕಷ್ಟು ಜನರಿಗೆ ಸಹಾಯವಾಗಲಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಮಾಡಿರುವ ಟ್ವೀಟ್‌ ಇದೀಗ ಭಾರೀ ಕುತೂಹಲಕ್ಕೆ ಕಾರಣವಾಗಿದೆ.
‌ಬುಧವಾರ ಟ್ವೀಟ್‌ ಮಾಡಿರುವ ಸೌರವ್‌ ಗಂಗೂಲಿ ವೃತ್ತಿಜೀವದಲ್ಲಿ ಹೊಸ ಅಧ್ಯಾಯಕ್ಕೆ ಕಾಲಿಡಲಿದ್ದೇನೆ. ಇದರಿಂದ ಸಾಕಷ್ಟು ಜನರಿಗೆ ಅನುಕೂಲವಾಗಲಿದೆ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ಇತ್ತೀಚೆಗಷ್ಟೆ ಕೇಂದ್ರ ಸಚಿವ ಅಮಿತ್‌ ಶಾ ಅವರನ್ನು ಭೇಟಿ ಮಾಡಿದ್ದ ಗಂಗೂಲಿ ಗೌಪ್ಯ ಮಾತುಕತೆ ನಡೆಸಿದ್ದರು. ಅಲ್ಲದೇ ಬಿಜೆಪಿ ಜೊತೆ ಪದೇಪದೆ ಗುರುತಿಸಿಕೊಳ್ಳುತ್ತಿರುವ ಗಂಗೂಲಿ ರಾಜಕೀಯ ಪ್ರವೇಶಿಸುತ್ತಾರೆ ಎಂಬ ವದಂತಿ ಹಲವು ದಿನಗಳಿಂದ ಹರಿದಾಡುತ್ತಿದ್ದು, ಇದೀಗ ಈ ಟ್ವೀಟ್‌ ಮತ್ತಷ್ಟು ಕುತೂಹಲ ಕೆರಳಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಶೇಷ ಚೇತನ ಅಭಿಮಾನಿಯ ಕಣ್ಣೀರೊರೆಸಿದ ಧೋನಿ: ಅನುಭವ ಹಂಚಿಕೊಂಡ ಅಭಿಮಾನಿ