ಐಪಿಎಲ್ ಟಿ-20 ಟೂರ್ನಿಯ 13ನೇ ಆವೃತ್ತಿ ಮುಕ್ತಾಯಗೊಳ್ಳುತ್ತಿದ್ದಂತೆ ಇದೇ ಮೊದಲ ಬಾರಿ ಬಿಸಿಸಿಐ ಮೈದಾನ ಸಿಬ್ಬಂದಿಗೆ 1.25 ಕೋಟಿ ರೂ. ಬಹುಮಾನ ಘೋಷಿಸಿದೆ.
ಐಪಿಎಲ್ ಟೂರ್ನಿಯಲ್ಲಿ ಮೈದಾನ ಸಿದ್ಧಪಡಿಸಿದ ಕ್ಯೂರೇಟರ್ ಹಾಗೂ ಮೈದಾನದ ಸಿಬ್ಬಂದಿಗೆ 1.25 ಕೋಟಿ ರೂ. ಬಹುಮಾನ ಘೋಷಿಸಲಾಗಿದೆ.
ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡ 7 ವಿಕೆಟ್ ಗಳಿಂದ ರಾಜಸ್ಥಾನ್ ರಾಯಲ್ಸ್ ತಂಡವನ್ನು ಸೋಲಿಸಿ ಪ್ರಶಸ್ತಿ ಎತ್ತಿ ಹಿಡಿದಿತ್ತು.
ಮಂಗಳವಾರ ಟ್ವೀಟ್ ಮಾಡಿದ ಬಿಸಿಸಿಐ ಖಜಾಂಚಿ ಜೈ ಶಾ, ಐಪಿಎಲ್ ಟಿ-20 ಟೂರ್ನಿಯಲ್ಲಿ ಅತ್ಯಂತ ಅದ್ಭುತವಾದ ಪಂದ್ಯಗಳು ಕಾರಣರಾದ ಕಾಣದ ಹೀರೋಗಳಾದ ಮೈದಾನದ ಸಿಬ್ಬಂದಿಗೆ 1.25 ಕೋಟಿ ರೂ. ಬಹುಮಾನ ಘೋಷಿಸಲು ಸಂತೋಷವಾಗುತ್ತಿದೆ ಎಂದು ಪ್ರಕಟಿಸಿದ್ದಾರೆ.