Select Your Language

Notifications

webdunia
webdunia
webdunia
webdunia

ಐಪಿಎಲ್‌ ನಲ್ಲಿ ಈ ಸಾಧನೆ ಮಾಡಿದ ಮೊದಲಿಗ ಕೆಎಲ್‌ ರಾಹುಲ್!‌

ಐಪಿಎಲ್‌ ನಲ್ಲಿ ಈ ಸಾಧನೆ ಮಾಡಿದ ಮೊದಲಿಗ ಕೆಎಲ್‌ ರಾಹುಲ್!‌
bengaluru , ಗುರುವಾರ, 26 ಮೇ 2022 (14:37 IST)
ಲಕ್ನೋ ಸೂಪರ್‌ ಗೈಂಟ್ಸ್‌ ತಂಡದ ನಾಯಕ ಕೆಎಲ್‌ ರಾಹುಲ್‌ ಐಪಿಎಲ್‌ ಇತಿಹಾಸದಲ್ಲೇ 4 ಆವೃತ್ತಿಗಳಲ್ಲಿ 600ಕ್ಕಿಂತ ಅಧಿಕ ರನ್‌ ಗಳಿಸಿದ ಮೊದಲ ಆಟಗಾರ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.
ಕೋಲ್ಕತಾದಲ್ಲಿ ಬುಧವಾರ ನಡೆದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧದ ಎಲಿಮಿನೇಟರ್‌ ಪಂದ್ಯದಲ್ಲಿ 79 ರನ್‌ ಗಳಿಸಿ ಔಟಾದರು. ಆದರೆ 20 ರನ್‌ ಗಡಿ ದಾಟುತ್ತಿದ್ದಂತೆ ಕೆಎಲ್‌ ರಾಹುಲ್‌ ಟೂರ್ನಿಯಲ್ಲಿ ೬೦೦ ರನ್‌ ಗಡಿ ದಾಟಿದರು.
ಐಪಿಎಲ್‌ ಇತಿಹಾಸದಲ್ಲೇ ಅತೀ ಹೆಚ್ಚು ಬಾರಿ 600ಕ್ಕಿಂತ ಅಧಿಕ ರನ್‌ ಗಳಿಸಿದ ಮೊದಲ ಆಟಗಾರ ಎಂಬ ದಾಖಲೆಗೆ ರಾಹುಲ್‌ ಪಾತ್ರರಾಗಿದ್ದು, ರಾಹುಲ್‌ 15 ಪಂದ್ಯಗಳಲ್ಲಿ  661 ರನ್‌ ಗಳಿಸಿದ್ದಾರೆ.
ರಾಹುಲ್‌ ಈ ಹಿಂದಿನ 2021ರ ಆವೃತ್ತಿಯಲ್ಲಿ 13 ಪಂದ್ಯಗಳಿಂದ 670 ರನ್‌, 2020ಲ್ಲಿ 626, ಮತ್ತು 2018ರಲ್ಲಿ 650 ರನ್‌ ಗಳಿಸಿದರು.
ವೆಸ್ಟ್‌ ಇಂಡೀಸ್‌ ತಂಡದ ಕ್ರಿಸ್‌ ಗೇಲ್‌ ಮತ್ತು ಡೇವಿಡ್‌ ವಾರ್ನರ್‌ ಮೂರು ಆವೃತ್ತಿಗಳಲ್ಲಿ 600ಕ್ಕಿಂತ ಅಧಿಕ ರನ್‌ ಗಳಿಸಿದ ದಾಖಲೆ ಹೊಂದಿದ್ದರು. ಗೇಲ್‌ ಸತತ ಮೂರು ಆವೃತ್ತಿಗಳಲ್ಲಿ 600ಕ್ಕಿಂತ ಅಧಿಕ ರನ್‌ ಗಳಿಸಿದ ದಾಖಲೆ ಹೊಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾದಿಂದ ಡ್ರಾಪ್ ಆಗಿದ್ದ ಹಾರ್ದಿಕ್ ಪಾಂಡ್ಯ ಐಪಿಎಲ್ ಮೂಲಕ ಭರ್ಜರಿ ಎಂಟ್ರಿ