Select Your Language

Notifications

webdunia
webdunia
webdunia
webdunia

ಬಟ್ಲರ್ ಅಬ್ಬರ: ಗುಜರಾತ್ ಟೈಟಾನ್ಸ್ ಗೆ 189 ರನ್ ಗುರಿ

ಬಟ್ಲರ್ ಅಬ್ಬರ: ಗುಜರಾತ್ ಟೈಟಾನ್ಸ್ ಗೆ 189 ರನ್ ಗುರಿ
bengaluru , ಮಂಗಳವಾರ, 24 ಮೇ 2022 (22:03 IST)

ಆರಂಭಿಕ ಜೋಸ್ ಬಟ್ಲರ್ ಸಿಡಿಸಿದ ಅರ್ಧಶತಕದ ನೆರವಿನಿಂದ ರಾಜಸ್ಥಾನ್ ರಾಯಲ್ಸ್ ತಂಡ 189 ರನ್ ಗಳ ಕಠಿಣ ಗುರಿಯನ್ನು ಗುಜರಾತ್ ಟೈಟಾನ್ಸ್ ತಂಡಕ್ಕೆ ಒಡ್ಡಿದೆ.

ಕೋಲ್ಕತಾದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 188 ರನ್ ಕಲೆ ಹಾಕಿತು.

ಆರಂಭಿಕ ಆಘಾತಕ್ಕೆ ಒಳಗಾದ ರಾಜಸ್ಥಾನ್ ತಂಡಕ್ಕೆ ಜೋಸ್ ಬಟ್ಲರ್ ಮತ್ತು ನಾಯಕ ಸಂಜು ಸ್ಯಾಮ್ಸನ್ 2ನೇ ವಿಕೆಟ್ ಗೆ 68 ರನ್ ಸೇರಿಸಿ ತಂಡವನ್ನು ಕುಸಿತದಿಂದ ಪಾರು ಮಾಡಿದರು.

ಕೊನೆಯವರೆಗೂ ಏಕಾಂಗಿಯಾಗಿ ತಂಡವನ್ನು ಮುನ್ನಡೆಸಿದ ಬಟ್ಲರ್ 56 ಎಸೆತಗಳಲ್ಲಿ 12 ಬೌಂಡರಿ ಮತ್ತು 2 ಸಿಕ್ಸರ್ ಸೇರಿದ 89 ರನ್ ಬಾರಿಸಿ ಕೊನೆಯ ಎಸೆತದಲ್ಲಿ ರನೌಟ್ ಆದರು. ಸ್ಯಾಮ್ಸನ್ 26 ಎಸೆತಗಳಲ್ಲಿ 5 ಬೌಂಡರಿ ಮತ್ತು 3 ಸಿಕ್ಸರ್ ಒಳಗೊಂಡ 47 ರನ್ ಬಾರಿಸಿದರು.

ದೇವದತ್ ಪಡಿಕಲ್ 20 ಎಸೆತಗಳಲ್ಲಿ 2 ಬೌಂಡರಿ ಮತ್ತು 2 ಸಿಕ್ಸರ್ ಸೇರಿದ 28 ರನ್ ಗಳಿಸಿದರು. ನಂತರದ ಬ್ಯಾಟ್ಸ್ ಮನ್ ಗಳು ಸತತವಾಗಿ ವಿಕೆಟ್ ಕಳೆದುಕೊಂಡು 200ರ ಗಡಿ ದಾಟುವ ಅವಕಾಶ ಕಳೆದುಕೊಂಡಿತು.


Share this Story:

Follow Webdunia kannada

ಮುಂದಿನ ಸುದ್ದಿ

ಏಷ್ಯಾಕಪ್ ಹಾಕಿ: ಭಾರತಕ್ಕೆ ಆಘಾತ ನೀಡಿದ ಜಪಾನ್