Select Your Language

Notifications

webdunia
webdunia
webdunia
Thursday, 10 April 2025
webdunia

ಫ್ರೆಂಚ್ ಓಪನ್: ಪುರುಷರ ಡಬಲ್ಸ್ ನಲ್ಲಿ ಸೆಮಿಫೈನಲ್ ತಲುಪಿದ ರೋಹನ್ ಬೋಪಣ್ಣ ಜೋಡಿ

ರೋಹನ್ ಬೋಪಣ್ಣ
ನವದೆಹಲಿ , ಮಂಗಳವಾರ, 31 ಮೇ 2022 (09:10 IST)
ನವದೆಹಲಿ: ಭಾರತದ ರೋಹನ್ ಬೋಪಣ್ಣ ಮತ್ತು ಅವರ ಡಚ್ ಪಾರ್ಟನರ್ ಮಿಡ್ಲ್ ಕೂಪ್ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ಸೆಮಿಫೈನಲ್ ಗೇರಿ ಸಾಧನೆ ಮಾಡಿದ್ದಾರೆ.

42 ವರ್ಷದ ಬೋಪಣ್ಣ ಕಳೆದ 7 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಸೆಮಿಫೈನಲ್ ಗೇರಿದ ಸಾಧನೆ ಮಾಡಿದ್ದಾರೆ. ಬ್ರಿಟಿಷ್-ಫಿನ್ನಿಶ್ ಜೋಡಿ ಗ್ಲಾಸ್ ಪೂಲ್ ಮತ್ತು ಹೆನ್ರಿ ಹೆಲಿವಾರ ವಿರುದ್ಧ 4-6, 6-4, 7-6 (3) ಅಂತರಗಳ ಗೆಲುವು ಕಂಡಿದ್ದಾರೆ. ಎರಡು ಗಂಟೆಗಳ ಕಾಲ ನಡೆದ ರೋಚಕ ಹಣಾಹಣಿಯಲ್ಲಿ ಬೋಪಣ್ಣ ಜೋಡಿ ಗೆಲುವು ಕಂಡಿತು.

ಇನ್ನು, ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಇಂದು ವಿಶ್ವದ ಶ್ರೇಷ್ಠ ಟೆನಿಸಿಗರಾದ ಜೊಕೊವಿಕ್ ಮತ್ತು ನಡಾಲ್ ನಡುವೆ ಕ್ವಾರ್ಟರ್ ಫೈನಲ್ ನಡೆಯಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2022: ರಿಟೈನ್ಡ್ ಆಟಗಾರರ ಫ್ಲಾಪ್ ಶೋ