ಮುಂಬೈ: ಚೆನ್ನೈ ಸೂಪರ್ ಕಿಂಗ್ಸ್ ಪರ ಐಪಿಎಲ್ ಆಡುವ ಟೀಂ ಇಂಡಿಯಾ ಕ್ರಿಕೆಟಿಗ ದೀಪಕ್ ಚಹರ್ ಮತ್ತು ಗೆಳತಿ ಜಯಾ ಪ್ರೇಮಮಹಲ್ ತಾಜ್ ಇರುವ ಆಗ್ರಾದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ.
ಜೂನ್ 1 ರಂದು ಈ ಜೋಡಿ ಅದ್ಧೂರಿಯಾಗಿ ವಿವಾಹವಾಗಲಿದ್ದಾರೆ. ಇವರ ಮದುವೆ ಕಾರ್ಯಕ್ರಮಕ್ಕೆ ಸಿಎಸ್ ಕೆ ನಾಯಕ ಧೋನಿ, ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸೇರಿದಂತೆ ಬಹುತೇಕ ಭಾರತೀಯ ಕ್ರಿಕೆಟಿಗರು ಆಗಮಿಸಲಿದ್ದಾರೆ.
ಕಳೆದ ವರ್ಷ ಐಪಿಎಲ್ ಪಂದ್ಯದ ವೇಳೆ ಪ್ರೇಕ್ಷಕರ ಗ್ಯಾಲರಿಯಲ್ಲೇ ದೀಪಕ್ ತಮ್ಮ ಗೆಳತಿ ಜಯಾಗೆ ಪ್ರಪೋಸ್ ಮಾಡಿದ್ದರು. ಈ ವಿಡಿಯೋಗಳು ಅಂದು ಭಾರೀ ವೈರಲ್ ಆಗಿತ್ತು.