Select Your Language

Notifications

webdunia
webdunia
webdunia
webdunia

ಐಪಿಎಲ್ ಫೈನಲ್ ನಲ್ಲಿ ರಣವೀರ್ ಸಿಂಗ್, ಎಆರ್ ರೆಹಮಾನ್ ಕಾರ್ಯಕ್ರಮ

ಐಪಿಎಲ್ ಫೈನಲ್ ನಲ್ಲಿ ರಣವೀರ್ ಸಿಂಗ್, ಎಆರ್ ರೆಹಮಾನ್ ಕಾರ್ಯಕ್ರಮ
ಅಹಮ್ಮದಾಬಾದ್ , ಭಾನುವಾರ, 29 ಮೇ 2022 (08:40 IST)
ಅಹಮ್ಮದಾಬಾದ್: ಐಪಿಎಲ್ 2022 ರ ಫೈನಲ್ ಪಂದ್ಯದಲ್ಲಿ ಈ ಬಾರಿ ಮತ್ತೆ ಸಮಾರೋಪ ಸಮಾರಂಭ ನಡೆಯಲಿದೆ. ಈ ವೇಳೆ ಬಾಲಿವುಡ್ ನಟ ರಣವೀರ್ ಸಿಂಗ್, ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.

ಅಲ್ಲದೆ ಸ್ವಾತಂತ್ರ್ಯಾ ನಂತರ 75 ವರ್ಷಗಳಲ್ಲಿ ಭಾರತೀಯ ಕ್ರಿಕೆಟ್ ರಂಗದ ಇತಿಹಾಸ, ಜಾರ್ಖಂಡ್ ನ ಸಾಂಪ್ರದಾಯಿಕ ನೃತ್ಯ ಪ್ರದರ್ಶನವಿರಲಿದೆ.

ಫೈನಲ್ ಪಂದ್ಯದ ವೇಳೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಕಾರ್ಯದರ್ಶಿ ಜಯ್ ಶಾ, ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕರುಗಳು ಉಪಸ್ಥಿತರಿರಲಿದ್ದಾರೆ. ಅಂತೂ, ಬಹಳ ವರ್ಷಗಳ ನಂತರ ಐಪಿಎಲ್ ಗೆ ಅದ್ಧೂರಿಯಾಗಿ ವರ್ಣರಂಜಿತ ಸಮಾರಂಭದ ಮೂಲಕ ತೆರೆ ಬೀಳಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2022 ಫೈನಲ್: ಅಂತಿಮ ಕದನಕ್ಕೆ ಸಿದ್ಧವಾಯ್ತು ರಾಯಲ್ಸ್-ಗುಜರಾತ್